ಸುಳ್ಯ | ಕರೋನವೈರಸ್ ನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲಿಗೆ ಇದ್ದ ಗಾಂಭೀರ್ಯತೆ ನಂತರದ ದಿನಗಳಲ್ಲಿ ಕಡಿಮೆಯಾಗಿದೆ – ಎಂ ವೆಂಕಪ್ಪ ಗೌಡ

ವರದಿ : ಹಸೈನಾರ್ ಜಯನಗರ
ಕೊರೋಣ ಎಂಬ ಮಹಾಮಾರಿಯು ಭಾರತಕ್ಕೆ ಕಾಲಿಟ್ಟ ಪ್ರಥಮ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಹಲವಾರು ಜನಜಾಗೃತಿ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದವು. ಇದು ಜನತೆಯಲ್ಲಿ ಪ್ರಶಂಸೆಗೂ ಕಾರಣವಾಗಿತ್ತು. ಆ ದಿನಗಳಲ್ಲಿ ನಡೆದಂತಹ ಕಾರ್ಯವೈಖರಿಯ ಬಗ್ಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಇದೇ ರೀತಿ ಜಿಲ್ಲಾಡಳಿತವು ತಾಲೂಕು ಆಡಳಿತ ವತಿಯಿಂದ ಅಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆಗಳು ಕೊರೋಣ ನಿಯಂತ್ರಿಸುವ ಜವಾಬ್ದಾರಿಯುತ ಕೆಲಸ ಕಾರ್ಯಗಳು ನಡೆದಿದ್ದವು.


ಆದರೆ ದಿನ ಕಳೆದಂತೆ ಕೇಂದ್ರ ಸರ್ಕಾರ ರಾಜ್ಯಸರ್ಕಾರ ಕೊರೋಣ ವೈರಸ್ಸಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್ ಡೌನ್ ಪದ್ಧತಿಯಲ್ಲಿ ಬದಲಾವಣೆ ಮಾಡಿ ಎಲ್ಲಾ ಉತ್ತಮ ಕೆಲಸ ಕಾರ್ಯಗಳಿಗೆ ತಾವೇ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಮೇ 20ರಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ ಆರೋಪಿಸಿದ್ದಾರೆ.
ಈ ಮೊದಲು ಪ್ರಧಾನಮಂತ್ರಿ ನರೇಂದ್ರಮೋದಿಯವರು ಚಪ್ಪಾಳೆ ತಟ್ಟಲು ಸೂಚಿಸಿದಾಗ ದೇಶದ ಜನತೆ ಚಪ್ಪಾಳೆಯನ್ನು ತಟ್ಟಿದ್ದಾರೆ. ದೀಪವನ್ನು ಬೆಳಗಿಸಿ ಎಂದಾಗ ದೀಪವನ್ನು ಬೆಳಗಿಸಿದ್ದೇವೆ. ಇವೆಲ್ಲವೂ ಆದ ನಂತರವೂ ದೇಶದಲ್ಲಿ ಕೋರೋಣ ಸೋಂಕಿತರ ಜನಸಂಖ್ಯೆ ಇಂದು ಲಕ್ಷಕ್ಕೂ ದಾಟಿದೆ. ಅಂದು ಮಾತನಾಡಿದ ಪ್ರಧಾನಮಂತ್ರಿಯವರು ದೇಶದ ಜನತೆಯ ಹಿತದೃಷ್ಟಿಯಿಂದ ಆರ್ಥಿಕತೆ ಮುಖ್ಯವಲ್ಲ ಜನರ ಆರೋಗ್ಯ ಮುಖ್ಯವಾದದ್ದು ಎಂದು ಹೇಳಿದರು .ಆದರೆ ಇದೀಗ ಆರೋಗ್ಯದ ಜೊತೆಜೊತೆಯಲ್ಲಿಯೇ ಆರ್ಥಿಕತೆಯು ಕೂಡ ಮುಖ್ಯವಾದದ್ದು ಎಂದು ಹೇಳಿ ಲಾಕ್ ಡೌನ್ ಸಡಿಲಗೊಳಿಸಿ ಹೊರ ರಾಜ್ಯದವರನ್ನು ವಲಸೆ ಕಾರ್ಮಿಕರನ್ನು ಪ್ರಯಾಣಕ್ಕೆ ಅನುವು ಮಾಡಿಕೊಟ್ಟ ಪರಿ ಸರಿಯಲ್ಲ ಎಂದು ಅವರು ಹೇಳಿದರು. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೋರೋಣ ಶಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಇದಕ್ಕೆ ಮೂಲಕಾರಣ ಹೊರರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಜನತೆ ಬರುತ್ತಿರುವುದು ಕಾರಣವಾಗಿದೆ .

ಆರಂಭದ ದಿನಗಳಲ್ಲಿ ಈ ರೀತಿಯ ವಲಸೆ ಕಾರ್ಮಿಕರಿಗೆ ಮತ್ತು ಹೊರ ರಾಜ್ಯದವರಿಗೆ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಲ್ಲ ಇಂದು ಈ ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿರಲಿಲ್ಲಾ ಎಂದು ಅಭಿಪ್ರಾಯವ ಪಟ್ಟರು. ಈ ರೀತಿಯ ಘಟನೆಗಳಿಂದಾಗಿ ಇಂದು ಸುಳ್ಯದಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.
ಸುಳ್ಯದಲ್ಲಿ ಕಲ್ಪಿಸಿರುವ ಕೋರಂಟೈನ್ ಕೇಂದ್ರದಲ್ಲಿ ವ್ಯವಸ್ಥೆಗಳು ಸರಿ ಇಲ್ಲ. ಮಹಾರಾಷ್ಟ್ರ ಭಾಗಗಳಿಂದ ಬಂದ ಪ್ರಯಾಣಿಕರನ್ನು ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ನೋಡಿಕೊಳ್ಳಬೇಕು. ಅವರ ಕುಟುಂಬಸ್ಥರಿಗೆ ಭೇಟಿ ಮಾಡಲು ಹಾಗೂ ಸಂದರ್ಶಿಸಲು ಅನು ಮಾಡಿಕೊಟ್ಟಿರುವುದು ಸರಿಯಾದ ವಿಧಾನವಲ್ಲ. ಈ ರೀತಿ ಯಾಗಿದ್ದರೆ ಅವರನ್ನು ಪ್ರತ್ಯೇಕವಾಗಿ ಇಡುವ ಅವಶ್ಯಕತೆ ಇರಲಿಲ್ಲ .ಸಂದರ್ಶಿಸಿದವರು ನಂತರ ಇಡೀ ಸುಳ್ಯ ಪೇಟೆಯಲ್ಲಿ ಸುತ್ತಿ ನಂತರ ಅವರವರ ಮನೆಗೆ ಹಿಂತಿರುಗುತ್ತಿದ್ದಾರೆ.ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಬಂದರೆ ಇಡೀ ತಾಲೂಕಿಗೆ ತೊಂದರೆ ಉಂಟ ಮಾಡುತ್ತದೆ . ಅವರು ಶಂಕಿತರು ಅಲ್ಲದಿದ್ದರೂ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಾದದ್ದು ತಾಲೂಕು ಆಡಳಿತದ ಸಂಪೂರ್ಣ ಜವಾಬ್ದಾರಿ . ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಅಧಿಕಾರಿ ವರ್ಗದವರಿಂದ ವ್ಯವಸ್ಥೆಯನ್ನು ಕಲ್ಪಿಸಬೇಕೇ ವಿನಃ ಕುಟುಂಬಸ್ಥರು ಮನೆಯವರು ಅವರಿಗೆ ಆಹಾರ ಪದಾರ್ಥಗಳನ್ನು ತಂದು ನೀಡುವುದು ಸರಿಯಲ್ಲ. ಅಧಿಕಾರಿ ವರ್ಗದವರು ಕೂಡ ಕೇಂದ್ರಗಳಿಗೆ ಹೋಗುವಾಗ ಸಂಪೂರ್ಣವಾಗಿ ಅವರ ರಕ್ಷಣೆಯೊಂದಿಗೆ ಹೋಗುವುದು ಉತ್ತಮ ಎಂದು ಹೇಳಿದರು.


ಸುಳ್ಯದಲ್ಲಿರುವ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಕೆಲವು ಬ್ಯಾಂಕುಗಳಲ್ಲಿ ಜನಸಂದಣಿಯ ಹೆಚ್ಚಿಗೆ ಇದ್ದು ಅಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಆಗಲಿ ಅಥವಾ ಸ್ಯಾನಿಟೈಸರ್ ವಸ್ತುಗಳನ್ನು ಬಳಸಿಕೊಳ್ಳುವುದಾಗಲಿ ಕಂಡುಬರುತ್ತಿಲ್ಲ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.


ಲಾಕ್ ಡೌನ್ ನಿಂದ ಜನಸಾಮಾನ್ಯರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಇದ್ದು ರಾಜ್ಯ ಸರ್ಕಾರವು ಮೂರು ತಿಂಗಳ ವಿದ್ಯುಚ್ಛಕ್ತಿಯ ಬಿಲ್ಲನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಬ್ಯಾಂಕುಗಳಿಂದ ಪಡೆದಂತಹ ಮೂರು ತಿಂಗಳ ಸಾಲದ ಇಎಂಐ ಯನ್ನು ಮತ್ತು ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿಎಸ್ ಗಂಗಾಧರ್ ಉಪಸ್ಥಿತರಿದ್ದರು.

Leave A Reply

Your email address will not be published.