ವಿಟ್ಲದ ಕನ್ಯಾನ ಗ್ರಾಮದ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಶ್ರೀ ಡಾ. ಶಶಿಕಾಂತ ಸ್ವಾಮೀಜಿ ನಿಧನ

ವಿಟ್ಲದ ಕನ್ಯಾನ ಗ್ರಾಮದ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಶ್ರೀ ಡಾ. ಶಶಿಕಾಂತ ಸ್ವಾಮೀಜಿ ( 45 ವ.) ಅನಾರೋಗ್ಯದಿಂದ ನಿಧನರಾದರು.

ಬಾಳೆಕೋಡಿ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು.

ಪ್ರತಿನಿತ್ಯ ಇಲ್ಲಿಗೆ ಕರ್ನಾಟಕ ಹಾಗೂ ಕೇರಳ ರಾಜ್ಯದಿಂದ ಹಲವು ಭಕ್ತರು ತಮ್ಮ ಕಷ್ಟಗಳ ನಿವಾರಣೆಗಾಗಿ ಬರುತ್ತಿದ್ದರು. ಅವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ಸಮಯ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಕ್ಷೇತ್ರದ ಸಮೀಪದಲ್ಲಿರುವ ಮನೆಯಲ್ಲಿದ್ದರು. ಅವರಿಗೆ ಡಾಕ್ಟರೇಟ್ ಬಿರುದು ಕೂಡ ಲಭಿಸಿತ್ತು. ತೀರಾ ಅನಾರೋಗ್ಯದಿಂದ ಕ್ಷೇತ್ರದಲ್ಲಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.

Leave A Reply

Your email address will not be published.