ಶಾಮಿಯಾನ, ಸೌಂಡ್, ಲೈಟಿಂಗ್ ಉದ್ಯಮ ಕಾರ್ಮಿಕರಿಗೆ ಸಹಾಯಧನ ನೀಡಲು ಮನವಿ

ಕೊವಿಡ್ 19 ರ ವಿಚಾರದಲ್ಲಿ ಎಲ್ಲ ಉದ್ಯೋಗದವರಿಗೂ ಸರಕಾರ ಸಹಾಯ ಮಾಡಿದ್ದು ಅದರೆ ಶಾಮಿಯಾನ, ಸೌಂಡ್, ಲೈಟಿಂಗ್ ನಡೆಸುವ ಸ್ವಂತ ಉದ್ಯಮದಾರರಿಗೆ ಮತ್ತು ಕಾರ್ಮಿಕರಿಗೆ ಸರಕಾರ ಯಾವುದೇ ಸಹಾಯ ಮಾಡಿಲ್ಲ.

ಈ ಉದ್ಯಮದಲ್ಲಿ ಕನಿಷ್ಠ 10 ನೌಕರರಿದ್ದು ಇವರ ಜೀವನ ನಿರ್ವಹಣೆಯ ಹೊರೆ ಮಾಲಿಕರ ಮೇಲೆ ಇದೆ ಮತ್ತು ಈ ವ್ಯವಹಾರ ಕ್ಕೆ ಬ್ಯಾಂಕ್ ಗಳಿಂದ ಸಾಲ ಪಡೆದಿರುವುದು,ಇನ್ನು ಕಾರ್ಯಕ್ರಮ ನವೆಂಬರ್ ನಂತರವೇ ಇರುವುದರಿಂದ ಇದೀಗ ಅದಾಯಕ್ಕೆ ಕುತ್ತು ಬಂದಿದೆ.

ಇದರ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರು, ಉಸ್ತುವಾರಿ ಮಂತ್ರಿಗಳು, ಸಂಸದರು ಗಮನಹರಿಸಿ ನಮ್ಮ ವ್ಯವಹಾರಕ್ಕೂ ಸರಕಾರದಿಂದ ಸಹಾಯ ಮಾಡಿ ಎಂದು ಶಿವದುರ್ಗ ಶಾಮಿಯಾನ ಮಾಲಕ ಜಯರಾಮ ಉಮಿಕ್ಕಳ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತಕ್ಷಣ ತರುವಂತೆ, ಪ್ರತಿ ತಾಲೂಕಿನಲ್ಲಿ ನಮ್ಮ ವ್ಯವಹಾರ ನಡೆಸುವವರು ತಮ್ಮ ಕ್ಷೇತ್ರದ ಶಾಸಕರ ಗಮನಕ್ಕೆ ತರಲು ವಿನಂತಿಸಿದ್ದಾರೆ.

Leave A Reply

Your email address will not be published.