ಸುಳ್ಯ | ಅಂತರ್ ಜಿಲ್ಲಾ ಪ್ರಯಾಣವನ್ನು ಆರಂಭಿಸಿದ ಸರಕಾರಿ ಮತ್ತು ಖಾಸಗಿ ಬಸ್ ಗಳು
ವರದಿ : ಹಸೈನಾರ್ ಜಯನಗರ
ಲಾಕ್ ಡೌನ್ ನಾಲ್ಕನೆಯ ಹಂತದ ಸಂದರ್ಭದಲ್ಲಿ ರಾಜ್ಯ ಸರಕಾರವು ಹೊರಡಿಸಿರುವ ಆದೇಶದ ಹಿನ್ನೆಲೆ ರಾಜ್ಯದಾದ್ಯಂತ ಸಂಚರಿಸಲು ಕೆ.ಎಸ್.ಆರ್ ಟಿಸಿ ಬಸ್ ಗಳನ್ನು ಇಂದು ರಸ್ತೆಗೆ ಇಳಿಸಲಾಗಿದೆ.
ಇದರ ಅಂಗವಾಗಿ ಸುಳ್ಯ ಬಸ್ ನಿಲ್ದಾಣದಿಂದ ಮಡಿಕೇರಿ, ಪುತ್ತೂರು, ಸುಬ್ರಮಣ್ಯ ಕಡೆಗಳಿಗೆ ಇಂದು ಬಸ್ಸುಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಕಾರ್ಯಾರಂಭ ಗೊಂಡಿದೆ. ಇದರೊಂದಿಗೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಮುಂಗಡವಾಗಿ ಟಿಕೆಟ್ ಅನ್ನು ಪಡೆದುಕೊಂಡು ಮಾರನೆಯ ದಿನ ಅವರನ್ನು ಬೆಂಗಳೂರಿಗೆ ಹೋಗಲು ಬಸ್ ಸೌಲಭ್ಯ ಓದಗಿಸಲಾಗಿದೆ.
ಒಂದು ಬಸ್ಸ್ ನಲ್ಲಿ 30 ಜನರ ಪರಿಮಿತಿ ಇರುವ ಹಿನ್ನೆಲೆಯಲ್ಲಿ 30 ಜನರಿಗಿಂತ ಹೆಚ್ಚು ಪ್ರಯಾಣಿಕರು ಲಭ್ಯ ಇರುವ ಸಂದರ್ಭದಲ್ಲಿ ಎರಡನೇ ಬಸ್ ನ್ನು ಓದಗಿಸಲಾಗುವುದು ಹಾಗೂ ಪ್ರಯಾಣಿಕರು ಬರುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಿಕೊಳ್ಳಬೇಕು ಅದೇ ರೀತಿ ಪ್ರಯಾಣಿಕರ ಟೆಂಪರೇಚರ್ ಪರಿಶೀಲನೆ ನಡೆಸಿ ಸ್ಯೆನಿಟಾರೈಸರ್ ನೀಡಿ ಜನರನ್ನು ಸುರಕ್ಷಿತವಾಗಿ ಕೊಂಡೊಯ್ಯುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸುಳ್ಯ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸುಂದರ ರಾಜ್ ತಿಳಿಸಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಗಳನ್ನು ಸಂಚಾರಕ್ಕೆ ಹೆಚ್ಚು ಮಾಡಲಾಗುವುದು.
ಅದೇ ರೀತಿ ಸುಳ್ಯದಲ್ಲಿ ಖಾಸಗಿ ಬಸ್ ಗಳು ಮತ್ತು ಸರ್ವಿಸ್ ವ್ಯಾನ್ ಗಳು ಹಲವು ದಿನಗಳ ನಂತರ ಸುಳ್ಯದ ಖಾಸಗಿ ಬಸ್ ನಿಲ್ದಾಣದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚಾರ ಆರಂಭಿಸಿದೆ.
ಒಟ್ಟಿನಲ್ಲಿ ಕಳೆದ ಎರಡು ತಿಂಗಳಿನಿಂದ ಮೌನವಾಗಿದ್ದ ಬಸ್ ನಿಲ್ದಾಣಗಳು ಇಂದು ಕಳೆ ಬಂದಂತೆ ಗೋಚರಿಸುತ್ತಿದೆ. ಯಾವುದಕ್ಕೂ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅಧಿಕಾರಿಗಳು ನಿರ್ದೇಶಿಸುವ ಕಾರ್ಯಗಳನ್ನು ಪಾಲಿಸಿಕೊಂಡು ಈ ಮಹಾಮಾರಿ ಕೊರೊನ ವೈರಸನ್ನು ನಿಯಂತ್ರಿಸುವಲ್ಲಿ ಬದ್ಧರಾಗಬೇಕಾಗಿದೆ.