ಸುಳ್ಯ | ಅಲ್ ಮದಿನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದಿಂದ ಭೋಜನದ ವ್ಯವಸ್ಥೆ

ವರದಿ : ಹಸೈನಾರ್ ಜಯನಗರ

ಅಲ್- ಮದೀನ ಚಾರಿಟೇಬಲ್ ಟ್ರಸ್ಟ್ ಪೈಚಾರಿನ ಯುವಕರ ಸಂಘಟನೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದೆ ಇಂದು ಪೈಚಾರು ಪರಿಸರದ ಸುಮಾರು 280 ಮನೆಗಳಿಗೆ ದಾನಿಗಳ ನೆರವಿನಿಂದ ಭೋಜನ ಕಿಟ್ ವಿತರಣೆಯನ್ನು ನಡೆಸಲಾಗಿದೆ.

ಈ ಒಂದು ಕಾರ್ಯಕ್ರಮಕ್ಕೆ ಸಂಘಟನೆಯ ಹಲವಾರು ಯುವಕರು ಕೈಜೋಡಿಸಿದ್ದು ಸ್ಥಳೀಯ ಪರಿಸರದ ಜನತೆಯಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಅದೇರೀತಿ ಸಂಘಟನೆಯ ಕಾರ್ಯಕರ್ತರಲ್ಲಿ ಓರ್ವರಾದ ಅಶ್ರಫ್ ಎಂಬುವವರು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಯುವಜನಾಂಗಕ್ಕೆ ಮಾದರಿಯಾಗಿರುತ್ತಾರೆ. ಪರಿಸರದಲ್ಲಿ ಮತ್ತು ಸುಳ್ಯದ ಹಲವುಭಾಗಗಳಲ್ಲಿ ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ಕೆ, ಅದೇ ರೀತಿ ಕಷ್ಟದಲ್ಲಿರುವ ರೋಗಿಗಳಿಗೆ ಸ್ಪಂದನೆ ನೀಡುವುದು, ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು ಮುನ್ನೂರು ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸುವಲ್ಲಿ ಇವರು ಮೊದಲ ಸ್ಥಾನದಲ್ಲಿ ಇದ್ದರು.

ಅಶ್ರಫ್

ಇವರ ಈ ಸಮಾಜಮುಖಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ಪರಿಸರದ ಜನರಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಧುನಿಕ ಕಾಲದಲ್ಲಿ ಕೆಲವು ಯುವ ಸಮುದಾಯದ ಯುವಕರಲ್ಲಿ ಮಾದಕ ದ್ರವ್ಯಗಳ ವ್ಯಸನಕ್ಕೆ ತುತ್ತಾಗಿ ಜೀವನದ ಹಾದಿ ತಪ್ಪಿಸಿಕೊಳ್ಳುವಂತ ಸಂದರ್ಭದಲ್ಲಿ ಯುವ ಸಮುದಾಯಕ್ಕೆ ಮಾದರಿಯಾಗಿ ಅಶ್ರಫ್ ರವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ .

Leave A Reply

Your email address will not be published.