ಸುಳ್ಯ | ಹೊರರಾಜ್ಯಗಳಿಂದ ತವರಿಗೆ ಆಗಮಿಸಿದವರಿಗೆ ಕುಕ್ಕುಜಡ್ಕ ಸರಕಾರಿ ಶಾಲೆಯಲ್ಲಿ ಕ್ವಾರಂಟೈನ್

ಉದ್ಯೋಗ ನಿಮಿತ್ತ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿದ್ದ ಅಮರಮುಡ್ನೂರು ಗ್ರಾಮದ ನಿವಾಸಿಗಳು ಸರಕಾರದಿಂದ ಪಾಸ್ ಪಡೆದು ಸ್ವಂತ ಊರಿಗೆ ಬಂದಿದ್ದಾರೆ. ಇವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೇನ್ ನಲ್ಲಿ ಇಡಲಾಗಿದೆ.

ಗ್ರಾಮ ಪಂಚಾಯತ್ ಕಾರ್ಯಪಡೆಯವರು ತಮಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ಕುಕ್ಕುಜಡ್ಕ ಸರಕಾರಿ ಶಾಲೆಯಲ್ಲಿ ಮೂರು ಮಂದಿಯನ್ನು ಇನ್ಸಿಟ್ಯೂಶನಲ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಇದರ ಮೇಲುಸ್ತುವಾರಿಯನ್ನು ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಯು ಸದಸ್ಯರು ನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.