ಮಡಿಕೇರಿ ಕೊರೊನ ಪಾಸಿಟಿವ್ | ಸಂಪಾಜೆ ಗೆಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ಮಂದಿಗೆ ಕ್ವಾರೆಂಟೈನ್

ಮುಂಬೈಯಿಂದ ಮಡಿಕೇರಿಗೆ ಬಂದ ಮಹಿಳೆಗೆ ನಿನ್ನೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತೆಯ ಟ್ರಾವೆಲ್ ಹಿಸ್ಟರಿ ಅನುಸರಿಸಿ ಕೊಡಗು ಸಂಪಾಜೆ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದ 30 ಮಂದಿಗೆ ಸಿಬ್ಬಂದಿಗಳಿಗೆ ಕ್ವಾರಂಟೇನ್ ಮಾಡಲಾಗಿದೆ.

ಮುಂಬೈಯಿಂದ ಮಂಗಳೂರಿಗೆ ಬಂದು ಕಾರು ಸಂಪಾಜೆ ಮೂಲಕ ಮಡಿಕೇರಿಗೆ ಹೋಗುವ ವೇಳೆ ಕೊಡಗು ಸಂಪಾಜೆ ಗೇಟ್ ನಲ್ಲಿ‌ ಆಕೆಯನ್ನು ತಪಾಸಣೆಗೊಳಪಡಿಸಿ, ನೇರವಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಕಾರಣದಿಂದ ಕೊಡಗು ಸಂಪಾಜೆ ಗೇಟ್ ನಲ್ಲಿ ಕಾರ್ಯಾಚರಿಸುತ್ತಿದ್ದ ಕೊಡಗು ಸಂಪಾಜೆ ಕಂದಾಯ ನಿರೀಕ್ಷಕ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳು, ಪೊಲೀಸರು ಸೇರಿ 30 ಮಂದಿಯನ್ನು ಕ್ವಾರಂಟೇನ್ ನಲ್ಲಿಡಲಾಗಿದೆ.

Leave A Reply

Your email address will not be published.