ದಲಿತ ಯುವತಿಯರ ಮೇಲೆ ದೇವಾಲಯದ ಅರ್ಚಕರಿಂದಲೇ ನಿರಂತರ ಅತ್ಯಾಚಾರ | ಅರ್ಚಕರಿಬ್ಬರ ಬಂಧನ, ಮುಂದುವರಿದ ಶೋಧ

ಅಮೃತಸರ : ಇಬ್ಬರು ದಲಿತ ಯುವತಿಯರನ್ನು ಅಕ್ರಮ ಬಂಧನದಲ್ಲಿಟ್ಟು ಪದೇ ಪದೇ ಅತ್ಯಾಚಾರ ಎಸಗಿದ ಹೀನಾಯ ಕೃತ್ಯ ಅಮೃತಸರದಲ್ಲಿ ನಡೆದಿದೆ.

ಅತ್ಯಾಚಾರ ಮೇಲೆ ಅಮೃತಸರ ದೇವಾಲಯದ ಅರ್ಚಕ ಮತ್ತು ಅವರ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಅತ್ಯಾಚಾರ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವುದು ಬೇರಾರೂ ಅಲ್ಲ, ದೇವಾಲಯದ ಮುಖ್ಯ ಅರ್ಚಕ ಮಹಂತ್ ಗಿರ್ಧಾರಿ ನಾಥ್ ಮತ್ತವರ ಸಹಚರರು.

ಆರೋಪಿಯು ಅಮೃತಸರದ ಲೋಪೋಕ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್‌ ತೀರ್ಥ ಕಾಂಪ್ಲೆಕ್ಸ್ ನ ಗುರು ಜ್ಞಾನನಾಥ್ ಅಶ್ರಮ್ ವಾಲ್ಮೀಕಿ ತೀರ್ಥ ನಲ್ಲಿ ಮುಖ್ಯ ಅರ್ಚಕನಾಗಿ ಕಾರ್ಯ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಇಬ್ಬರು ಶೋಷಿತ ಮಹಿಳೆಯರು ಪಂಜಾಬ್ ರಾಜ್ಯ ಪರಿಶಿಷ್ಟ ಜಾತಿ ಸದಸ್ಯ ತಾರ್ಸೆಮ್ ಸಿಂಗ್ ಅವರಿಗೆ ಪತ್ರ ಬರೆದು ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿಟ್ಟ ಪದೇ ಪದೇ ಮತ್ತು ಮಹಂತ್ ಮತ್ತು ಅವರ ಜನರಿಂದ ಅತ್ಯಾಚಾರ ಎಂದು ಮಾಹಿತಿ ನೀಡಿದ್ದರು.

ತಕ್ಷಣ ತಾರ್ಸೆಮ್ ಸಿಂಗ್ ಸಯಾಲ್ಕಾ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದ ಮೇಲೆ ಪೊಲೀಸರು ದೇವಾಲಯದ ಸಂಕೀರ್ಣದ ಮೇಲೆ ದಾಳಿ ನಡೆಸಿದಾಗ ಅಲ್ಲಿ ಆ ಮಹಿಳೆಯರು ಪತ್ತೆಯಾಗಿದ್ದಾರೆ.

ಮೋಹನ್ ಗಿರ್ಧಾರಿನಾಥ್ ಮತ್ತು ಅವರ ಸಹಚರ ವರೀಂದರ್ ನಾಥ್ ಅವರನ್ನು ಬಂಧಿಸಿದ್ದಾರೆ. ಈ ವೇಳೆ ನಾಚತ್ತರ್ ಸಿಂಗ್ ಮತ್ತು ಸೂರಜ್ ನಾಥ್ ಎಂಬಿಬ್ಬರು ಪರಾರಿಯಾಗಿದ್ದಾರೆ. ಓಡಿಹೋಗಿರುವವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಡಿಎಸ್ಪಿ ಅಟಾರಿ ಗುರು ಪ್ರತಾಪ್ ಸಿಂಗ್ ಹೇಳಿದ್ದಾರೆ.

Leave A Reply

Your email address will not be published.