ರಾಜ್ಯದಲ್ಲಿ ಮೇ 19 ವರೆಗೆ ಲಾಕ್ ಡೌನ್ ಮುಂದುವರಿಕೆ | ಕರ್ನಾಟಕ ಸರ್ಕಾರದ ಆದೇಶ
ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ. ಮೇ.19ರ ಮಧ್ಯರಾತ್ರಿ 12 ಗಂಟೆಯ ತನಕ ಈಗಿರುವ ಮಾರ್ಗಸೂಚಿಗಳನ್ನೇ ಅನುಸರಿಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ಕೋವಿಡ್-19 ನಿಯಂತ್ರಣಕ್ಕೆ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಮೂರನೇ ಹಂತದಲ್ಲಿನ ಮಾರ್ಗಸೂಚಿಗಳಲ್ಲಿನ ಕ್ರಮಗಳನ್ನು ಕಡ್ಡಾಯವಾಗಿ ಮುಂದಿನ ಆದೇಶದವರೆಗೆ ಅಥವಾ ಮೇ 19 ರ ಮಧ್ಯರಾತ್ರಿ 12 ಗಂಟೆಯವರೆಗೂ ಪಾಲಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಆಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ತಿಳಿಸಿದ್ದಾರೆ.
ಮೊದಲ ಲಾಕ್ ಡೌನ್ ಮಾರ್ಚ್ 25 ರಿಂದ 21 ದಿನಗಳ ಕಾಲ ಹೇರಲ್ಪಟ್ಟಿತ್ತು.
ಲಾಕ್ ಡೌನ್ 2.0 ಅನ್ನು ಮಾರ್ಚ್ 15 ರಿಂದ ಮೇ ಮೂರರ ವರೆಗೆ ವಿಸ್ತರಿಲಾಗಿತ್ತು.
ಲಾಕ್ ಡೌನ್ 4.0 ಅನ್ನು ಮೇ 4 ರಿಂದ ಮೇ 17 ವರೆಗೆ ಮುಂದುವರಿಕೆ ಮಾಡಲಾಗಿತ್ತು.
ಇದೀಗ ಮುಂದಿನ ನಿರ್ಧಾರ ಬರುವ ತನಕ ಮತ್ತೆರಡು ದಿನ ಅಂದರೆ ಮೇ 19 ರ ವರೆಗೆ ವಿಸ್ತರಣೆ ಮಾಡಲಾಗಿದೆ.