ಮಡಿಕೇರಿ | ಕಾಮಪಿಶಾಚಿಗಳ ಕಾಮದಾಟಕ್ಕೆ ಬಲಿಯಾಯಿತು ಹೆಣ್ಣು ಜೀವ….


ಹಾಡಹಗಲೇ ಸೌದೆ ತರಲು ಹೋದ ಮಹಿಳೆಯ ಮೇಲೆ ಕಾಮುಕರು ಅತ್ಯಾಚಾರ ಎಸಗಿದ ದುರ್ಘಟನೆ ಮಡಿಕೇರಿ ತಾಲೂಕಿನ ತಾವೂರು ಗ್ರಾಮದಲ್ಲಿ ನಡೆದಿದೆ.

ತಾವೂರು ಗ್ರಾಮದ ಚಿದಾನಂದ ಹಾಗೂ ಚೇತನ್ ಈ ನೀಚ ಕೃತ್ಯ ಎಸಗಿದ ಆರೋಪಿಗಳು. ಸೌದೆ ತರಲು ಕಾಡಿಗೆ ಬಂದಿದ್ದ ಒಂಟಿ ಮಹಿಳೆಯ ಮೇಲೆ ಈ ನೀಚರು ಅತ್ಯಾಚಾರ ಎಸಗಿದ್ದು, ಅದನ್ನು ವಿಡಿಯೋ ಮಾಡಿಕೊಂಡರು. ನೈಜ ಘಟನೆಯನ್ನು ಹೊರಗಡೆ ತಿಳಿಸಿದಲ್ಲಿ ವಿಡಿಯೋವನ್ನು ವೈರಲ್ ಮಾಡುವುದಾಗಿ ತಿಳಿಸಿದ್ದರು. ಇದೀಗ ಅದನ್ನು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.