ಬೆಳ್ಳಾರೆ ಜೇಸಿಯ ಉಚಿತ ಆಹಾರ ವ್ಯವಸ್ಥೆ ಸಮರೋಪ | ಸವಾಲಿನ ಕೆಲಸವನ್ನು ಜೇಸಿ ಸಂಸ್ಥೆಯ ನಿರ್ವಹಿಸಿದೆ – ಅಂಜನೇಯ ರೆಡ್ಡಿ

ಬೆಳ್ಳಾರೆ ಜೇಸಿಐ ಸಂಸ್ಥೆ ಸುಮಾರು 28 ದಿನಗಳಿಂದ ನಡೆಸಿಕೊಂಡು ಬಂದ ಉಚಿತ ಊಟ, ಚಾ-ತಿಂಡಿ ವ್ಯವಸ್ಥೆಯ ಸಮಾರೋಪ ಸಮಾರಂಭ ಜೇಸಿ ಪೂರ್ವಧ್ಯಕ್ಷ ಅರ್ ಕೆ ಬೆಳ್ಳಾರೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯಅತಿಥಿ ಯಾಗಿ ಭಾಗವಹಿಸಿದ ಬೆಳ್ಳಾರೆ ಸಬ್ಇನ್ಸಪೆಕ್ಟರ್ ಅಂಜನೇಯ ರೆಡ್ಡಿ ಮಾತನಾಡಿ ಲಾಕ್ ಡೌನ್ ಸಂದರ್ಭದಲ್ಲಿ ಅದಿಕಾರಿ ವರ್ಗಕ್ಕೆ ಹಸಿವನ್ನು ನಿವಾರಿಸಿ ಅಗತ್ಯ ಸೇವೆ ನೀಡಿದ ಜೇಸಿ ಯ ದಾಖಲೆ ಕೆಲಸವಾಗಿದೆ, ಜೇಸಿ ಕಾರ್ಯದ ಮೆಚ್ಚುಗೆ ವ್ಯಕ್ತ ಪಡಿಸಿ ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡ ಜಯರಾಮ ಉಮಿಕ್ಕಳ ಇವರನ್ನು ಅಭಿನಂದಿಸಿದರು.

ಜೇಸಿ ಪೂರ್ವಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಸಹಕಾರ ನೀಡಿದವರಿಗೆ ಅಭಿನಂದನೆ ಮಾತಾಡಿ ದರು. ವೇದಿಕೆಯಲ್ಲಿ ಪೋಲಿಸ್ ಠಾಣೆಯ ಬಾಲಕೃಷ್ಣ, ನಾರಾಯಣ ಭಟ್ ಉಪಸ್ಥಿತಿದ್ದು,ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಪ್ರಾಸ್ತಾವಿಕ, ಆರ್ ಕೆ ಬೆಳ್ಳಾರೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜೇಸಿ ಪೂರ್ವಧ್ಯಕ್ಷರು, ಸದಸ್ಯರು ಹಾಜರಿದ್ದರು.

ಸೋಮಶೇಖರ, ಪುಟ್ಟಣ್ಣ, ಮಹೇಶ್ ಇವರನ್ನು ಅಭಿನಂದಿಸಲಾಯಿತು. ಅಜಪಿಲ ದೇವಸ್ಥಾನ ಸಮಿತಿಯವರು ಉಚಿತವಾಗಿ ಆಹಾರ ವ್ಯವಸ್ಥೆಗೆ ಸಭಾಂಗಣ ಒದಗಿಸಿದ್ದರು.

Leave A Reply

Your email address will not be published.