9ನೇ,10ನೇ ತರಗತಿ ಹಾಗೂ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ನೇರ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಮಾಡಲು ಅವಕಾಶ | ಸುಳ್ಯದ ಮ್ಯಾಟ್ರಿಕ್ ವಿದ್ಯಾಸಂಸ್ಥೆ
ಸುಳ್ಯ: 9ನೇ ತರಗತಿ, ಹತ್ತನೇ ತರಗತಿ ಹಾಗೂ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೇರವಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡುತ್ತಿದೆ ಸುಳ್ಯತಾಲೂಕಿನ ಮ್ಯಾಟ್ರಿಕ್ ವಿದ್ಯಾಸಂಸ್ಥೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದ ಹೃದಯ ಭಾಗದಲ್ಲಿರುವ ಈ ಸಂಸ್ಥೆ ಸುಮಾರು ಹತ್ತುವರ್ಷಗಳಿಂದ ಕಾರ್ಯಾಚರಿಸುತ್ತಿದ್ದು 9ನೇ ತರಗತಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೇರವಾಗಿ 10ನೇ ತರಗತಿಗೆ ಮತ್ತು ಪ್ರಥಮ ಪಿಯುಸಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಭಯಹಸ್ತ ನೀಡಿ ಹೊಸ ಹುರುಪಿನೊಂದಿಗೆ ನೇರವಾಗಿ ದ್ವಿತೀಯ ಪಿಯುಸಿಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲ ಮಾಡಿಕೊಡಿಕೊಡುವ ಮೂಲಕ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ.
ಮಡಿಕೇರಿ ,ಕುಶಾಲನಗರ ,ವಿರಾಜಪೇಟೆ, ಸೋಮವಾರಪೇಟೆ, ಭಾಗಮಂಡಲ,ಸಕಲೇಶಪುರ, ಹಾಸನ ಮುಂತಾದ ಕಡೆಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದು,ಪ್ರತಿ ವರ್ಷ ದಾಖಲಾತಿ ಪ್ರಮಾಣ ಏರುತ್ತಿರುವುದಲ್ಲದೇ ದಾಖಲೆಯ ಫಲಿತಾಂಶವನ್ನು ಪಡೆಯುತ್ತಿರುವುದು ಈ ಸಂಸ್ಥೆಯ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸಂಸ್ಥೆಯ ವಿಶೇಷತೆಗಳು:
- ಸುಸಜ್ಜಿತ ಅನುಕೂಲಕರ ತರಗತಿ ಕೊಠಡಿಗಳು.
- ಬೇಸಿಕ್ ಹಾಗೂ ಅಪ್ಡೇಟೆಡ್ ಕಂಪ್ಯೂಟರ್ ಕೋರ್ಸ್ ಗಳು.
- ಅನುಭವಿ ಹಾಗೂ ನುರಿತ ಉಪನ್ಯಾಸಕರಿಂದ ಬೋಧನೆ.
- ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪಿಜಿ ವ್ಯವಸ್ಥೆ.
- ಇಡೀ ಜಗತ್ತೇ ಕೊರೊನಾ ಮಹಾಮಾರಿಗೆ ತತ್ತರಿಸಿರುವ ಈ ಸಂದರ್ಭದಲ್ಲಿ ಈ ಸಂಸ್ಥೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದೊಂದಿಗೆ, ಶುಲ್ಕವನ್ನು ಪಾವತಿಸಲು ಕಂತಿನ ಅವಕಾಶವನ್ನು ಸಹಿತ ನೀಡಲಾಗುವುದು.