ಸುಬ್ರಹ್ಮಣ್ಯ | ಮೆಸ್ಕಾಂನಿಂದ ವಿದ್ಯುತ್ ಬಿಲ್ ಪಾವತಿಸಲು ಸೂಚನೆ

ಸುಬ್ರಹ್ಮಣ್ಯ: ಕೊರೋನಾ ಲಾಕ್ಡೌನ್ ಹಿನ್ನಲೆಯಲ್ಲಿ ಸುಬ್ರಮಣ್ಯ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವಿದ್ಯುತ್ ಬಿಲ್ ಪಾವತಿಸುವುದನ್ನು ಕಳೆದ ತಿಂಗಳಿನಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೆಸ್ಕಾಂ ಹೊರಡಿಸಿದ ಆದೇಶದಲ್ಲಿ ಬಿಲ್ ಪಾವತಿಸಲು ಸೂಚಿಸಲಾಗಿದೆ. ಸುಬ್ರಹ್ಮಣ್ಯ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಎಂಟು ಗ್ರಾಮಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಬಿಲ್ ಪಾವತಿಸಲು ಸೂಚಿಸಲಾಗಿದೆ. ಈ ಬಗ್ಗೆ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸುಬ್ರಮಣ್ಯ ಮೆಸ್ಕಾಂ ವ್ಯಾಪ್ತಿಗೆ ಬರುವ ವಿವಿಧ ಗ್ರಾಮದ ಗ್ರಾಹಕರು ಪ್ರತಿ ತಿಂಗಳು ಕೆಳಗೆ ಸೂಚಿಸಿದ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸೂಚಿಸಲಾಗಿದೆ. ಪಂಜದಲ್ಲಿ ದಿನಾಂಕ 2 ಮತ್ತು 20ರಂದು, ಗುತ್ತಿಗಾರಿನಲ್ಲಿ 12 ಮತ್ತು 18ರಂದು, ಎಣ್ಮೂರಿನಲ್ಲಿ 13ರಂದು, ಹರಿಹರ ಪಲ್ಲತಡ್ಕದಲ್ಲಿ 15 ಎಡಮಂಗಲದಲ್ಲಿ 18 ರಂದು (17 ಸಾರ್ವತ್ರಿಕ ರಜೆಯ ಕಾರಣ), ಎಲಿಮಲೆಯಲ್ಲಿ 16 ಮತ್ತು 24ರಂದು, ಅಲೆಕ್ಕಾಡಿಯಲ್ಲಿ 22 ರಂದು ಕಲ್ಮಡ್ಕದಲ್ಲಿ 29 ರಂದು ವಿದ್ಯುತ್ ಬಿಲ್ ಪಾವತಿಸುವಂತೆ ಸುಬ್ರಹ್ಮಣ್ಯಉಪವಿಭಾಗದ ಕಾಯ್ಯನಿರ್ವಾಹಕ ಅಭಿಯಂತರರು ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave A Reply

Your email address will not be published.