ಕೊರೋನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸುಧಾರಿಸಬೇಕು; ಪತ್ರಕರ್ತರಿಗೂ ಸಿಗಲಿ ಪ್ಯಾಕೇಜ್ | ಖಾದರ್

ಮಂಗಳೂರು : ನಮ್ಮ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ಸಂಖ್ಯೆ ಕಡಿಮೆಯಿದ್ದರೂ 5 ಮಂದಿ ಸಾವನ್ನಪ್ಪಿರುವುದು ನಿಜಕ್ಕೂ ದುರದೃಷ್ಟಕರ ಮತ್ತು ಆತಂಕಕಾರಿ ವಿಷಯ. ದಕ್ಷಿಣ ಕನ್ನಡ ಜಿಲ್ಲಾಡಳಿತ ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿದಂತಿಲ್ಲ ಎಂದು ಶಾಸಕ ಯ.ಟಿ. ಖಾದರ್‌ ಹೇಳಿದರು.

ದಕ್ಷಿನ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಒಂದು ತಿಂಗಳಲ್ಲಿ ಗಂಭೀರ ಸ್ಥಿತಿಗೆ ಜಿಲ್ಲೆ ತಲುಪಲಿದೆ. ಜಿಲ್ಲಾಡಳಿತಕ್ಕೆ ಇನ್ನೂ ಆಸ್ಪತ್ರೆಯ ಕೋರೋನಾ ಮೂಲ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್‌ ಅವಧಿ, ವಲಸೆ ಕಾರ್ಮಿಕರು, ವಿದೇಶದಿಂದ ಆಗಮನ, ಕ್ವಾರಂಟೈನ್‌, ಮಾರ್ಕೆಟ್‌ ಶಿಫ್ಟ್‌ ವಿಷಯದಲ್ಲಿ ಜಿಲ್ಲಾಡಳಿತ ಗೊಂದಲ ತಿರ್ಮಾನಗಳನ್ನೇ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಆದೇಶ ಪಾಲಿಸಲು ಕೆಲವರು ಬಿಡುವುದಿಲ್ಲ ಎಂದರು.

ಪತ್ರಕರ್ತರಿಗೂ ಸಿಗಲಿ ಪ್ಯಾಕೇಜ್‌

ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಜಿಡಿಪಿಯ ಶೇ.10 ಪ್ಯಾಕೇಜ್‌ ನೀಡುತ್ತಿದ್ದು, ಅದೇ ಮಾದರಿಯಲ್ಲಿ ಕೇಂದ್ರ ಸರಕಾರ 20 ಲಕ್ಷ ಕೋಟಿ ಪ್ಯಾಕೇಜ್‌ ನೀಡಿದೆ. ಆದರೆ ಇಲ್ಲಿ ಸಾಲದ ಕಂತು ಕಟ್ಟಲು ವಿನಾಯಿತಿ ಬಗ್ಗೆ ಹೇಳಿದ್ದರೆ ಹೊರತು ಬಡ್ಡಿ ಮನ್ನಾ ಮಾಡಿಲ್ಲ. ಸರಕಾರಗಳು ಪತ್ರಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಮ ಸಹಾಯಕಿಯರಿಗೆ, ಬಸ್‌ ಸಿಬ್ಬಂದಿ, ಟೈಲರ್‌ಗಳಿಗೆ, ಛಾಯಾಗ್ರಾಹಕರಿಗೆ, ಲ್ಯಾಬ್‌ ಟೆಕ್ನಿಷಿಯನ್‌ಗಳಿಗೆ ಪ್ಯಾಕೇಜ್‌ ಘೋಷಣೆ ಮಾಡಲಿ ಎಂದರು.

Leave A Reply

Your email address will not be published.