ಸಮಾಜಮುಖಿ ಕಾರ್ಯಗಳೊಂದಿಗೆ ಪ್ರಸಾದ್ ಅತ್ತಾವರ್ ಹುಟ್ಟು ಹಬ್ಬ ಆಚರಣೆ

ವರದಿ : ಎ. ಕೆ. ಶೆಟ್ಟಿ, ಮಂಗಳೂರು

ಸುಮಾರು ಮೂರು ನಾಲ್ಕು ದಶಕಗಳಿಂದ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಜೀವನವನ್ನೇ ಹಿಂದುತ್ವಕ್ಕಾಗಿ ಮೀಸಲಾಗಿಟ್ಟುಕೊಂಡು ಸಮಾಜಕ್ಕಾಗಿ ತನ್ನ ಮೇಲೆ ಮೂವತ್ತಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿಕೊಂಡು ತನ್ನದೇ ಸ್ವಂತ ರಾಮ್ ಸೇನಾ ಸಂಘಟನೆಯ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಯುವಕರ ಹೃದಯದಲ್ಲಿ ವಿರಾಜಮಾನರಾದ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ಹೆಸರು ನಿತ್ಯ ನಿರಂತರ ಸದ್ದು ಮಾಡುತ್ತಿದೆ.

ಹೆಸರೇ ಸೂಚಿಸುವಂತೆ ಪ್ರಸಾದ್ ಅತ್ತಾವರ್ ಯಾವ ಕೆಲಸಕ್ಕೆ ಕೈ ಹಾಕಿದರೂ ಅದು ಪರಿಣಾಮಕಾರಿಯಾಗಿ ಜಾರಿಗೊಳ್ಳುವುದೆಂಬುವುದಕ್ಕೆ 1992 ನಂತರ ಹಲವಾರು ಘಟನೆಗಳು ಸಾಕ್ಷಿಯಾಗಿದೆ.ಪ್ರಸಾದ್ ಅತ್ತಾವರ್ ಬಜರಂಗದಳದ ಜವಾಬ್ದಾರಿ ವಹಿಸಿಕೊಂಡ ಕಾಲಘಟ್ಟದಲ್ಲಿ ಆಗಿನ್ನೂ 18 ರ ಯುವಕ. ಗೋ ಹತ್ಯೆ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು,ಶ್ರದ್ದಾ ಕೇಂದ್ರದ ಮೇಲಿನ ದಾಳಿಗಳನ್ನು ಎದುರಿಸಿ ವಿರೋಧಿ ಪಾಳಯ ನಡುಗುವಂತೆ ಮಾಡಿದ್ದ ಅತ್ತಾವರ್ ರವರು ತನ್ನ ವಿಶಿಷ್ಟ ಶೈಲಿಯ ಮೂಲಕವೇ ಸಂಘಟನೆ ಕಾರ್ಯ ನಡೆಸುತ್ತಿದ್ದುದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅತ್ತಾವರ್ ಜತೆ ಸಂಘಟನೆಯಲ್ಲಿ ಕೈ ಜೋಡಿಸುತ್ತಿದ್ದಾರೆ.

ಇಂದಿಗೂ ಅತ್ತಾವರ್ ಒಂದು ಕರೆ ನೀಡಿದರೆ ಸಾವಿರಾರು ಯುವಕರು ಮುಗಿಬೀಳುತ್ತಾರೆ. ಇದೀಗ ಅತ್ತಾವರ್ ನೇತೃತ್ವದ ಪ್ರಸ್ತುತ ರಾಮ್ ಸೇನಾ ಸಂಘಟನೆಯು ರಾಜ್ಯವ್ಯಾಪಿ ಹಬ್ಬಿದ್ದು,ಕೊರೊನಾ ಸಂದರ್ಭದಲ್ಲಿ ನಿರ್ಗತಿಕ ವೃದ್ದರು ಕಾರ್ಮಿಕರ ಪರ ಸಂಘಟನೆಯು ಬಲವಾಗಿ ನಿಂತು ನೆರವಿನಲ್ಲಿ ತೊಡಗಿದೆ.

ಕಳೆದೆರೆಡು ದಿನಗಳ ಹಿಂದೆ ಪ್ರಸಾದ್ ಅತ್ತಾವರ್ ರವರು ಹುಟ್ಟು ಹಬ್ಬದ ಆಚರಣೆಯು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು,ಪ್ರೇರಣೆಯಾಗಿ ರಾಜ್ಯವ್ಯಾಪಿ ರಕ್ತದಾನ ಶಿಬಿರ,ರಾಜ್ಯದ ಅನಾಥಶ್ರಮಗಳ ವೃದ್ದರಿಗೆ ಅನ್ನದಾಸೋಹ, ಭಜನಾ ಸತ್ಸಂಗಗಳು, ಕೊರೊನಾ ವಾರಿಯರ್ಸ್ ಗಳಾದ ಆರಕ್ಷಕರು, ದಾದಿಯರು,ವೈಧ್ಯರಿಗೆ ಗೌರವಾರ್ಪಣೆ, ನಿರ್ಗತಿಕರಿಗೆ ಕಿಟ್ ವಿತರಣೆಯ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆದಿದೆ. ಇದರ ಜೊತೆಗೆ ಸಂಘಟನೆಯ ನೂತನ ಘಟಕಗಳ ರಚನೆಗೂ ಬಾರಿ ಬೇಡಿಕೆಗಳು ರಾಜ್ಯವ್ಯಾಪಿ ಬರುತ್ತಿದ್ದು,ಪ್ರಸಾದ್ ಅತ್ತಾವರ್ ನೇತ್ರತ್ವದಲ್ಲಿ ಸಂಘಟನಾ ಪರ್ವವು ತುಸು ಜೋರಾಗಿಯೇ ನಡೆಯುತ್ತಿದೆ.

Leave A Reply

Your email address will not be published.