ಸುಳ್ಯ | ಬಾಲಕನ ಜೀವಕ್ಕೆ ಮುಳುವಾಯಿತೇ ಉಯ್ಯಾಲೆಯ ಸೀರೆ…..?!

ಸುಳ್ಯ: ಲಾಕ್ಡೌನ್ ರಜೆಯಲ್ಲಿ ಸಮಯ ಕಳೆಯಲು ಆಟವಾಡಲು ಕಟ್ಟಿದ ಉಯ್ಯಾಲೇ ಬಾಲಕನೋರ್ವನ ಜೀವಕ್ಕೆ ಮುಳುವಾದ ಘಟನೆ ಇಂದು ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಕಂಜಿಪಿಲಿ ಶಿವರಾಮ ಎಂಬವರ ಪುತ್ರ 10 ನೇ ತರಗತಿ ಓದುತ್ತಿರುವ ದಿವೀಶ್ ಎಂಬಾತ ಮನೆಯಲ್ಲಿ ಕುತ್ತಿಗೆಗೆ ಸೀರೆ ಸುತ್ತಲ್ಪಟ್ಟು ಮೃತಪಟ್ಟಿದ್ದಾನೆ.
ಬೆಳಗ್ಗೆ ಮನೆಯ ಸಮೀಪ ಉಯ್ಯಾಲೆ ಆಡುತ್ತಿರವಾಗ ಆಯ ತಪ್ಪಿ ಆತ ಕೆಳಗೆ ಬೀಳುವಾಗ ಉಯ್ಯಾಲೆಯ ಸೀರೆ ಕುತ್ತಿಗೆಗೆ ಸುತ್ತಿ ಬಿಗಿಯಲ್ಪಟ್ಟು ಘಟನೆ ಸಂಭವಿಸಿರುವುದಾಗಿ ಕೆಲವರು ಹೇಳುವದಾದರೆ, ಇದು ಆತ್ಮಹತ್ಯೆಯ ಸಾಧ್ಯತೆ ಇದೆ ಎಂದೂ ಕೆಲವರು ಹೇಳುತ್ತಾರೆ.

ಆತನನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪ್ರಾಣಪಕ್ಷಿ ಹೋಗಿತ್ತೆನ್ನಲಾಗಿದ್ದು ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತ ದಿವೀಶ್ ತಂದೆ, ತಾಯಿ, ಸಹೋದರ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave A Reply

Your email address will not be published.