ಗೂನಡ್ಕ ಅಲ್ ಅಮೀನ್ ವತಿಯಿಂದ ಮಸೀದಿ ಪಾರ್ಕಿಂಗ್ ಸ್ಥಳ ಡಾಮರೀಕರಣ

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಹಾಗೂ ರಾಜ್ಯ ಹೆದ್ದಾರಿಯ ಮಧ್ಯೆ ಮಸೀದಿಗೆ ಆಗಮಿಸುವವರ ವಾಹನಕ್ಕೆ ಸೂಕ್ತ ಪಾರ್ಕಿಂಗ್ ವೆವಸ್ಥೆ ಯಿದ್ದು, ಮಳೆಗಾಲದಲ್ಲಿ ಅದು ಕೆಸರುಮಯವಾಗಿ ತೊಂದರೆ ಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಇಂಟರ್ ಲೋಕ್ ಅಳವಡಿಸಲು ಅಲ್ ಅಮೀನ್ ಸಂಸ್ಥೆಯು ಕಳೆದ ಮೀಲಾದ್ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಯೋಜನೆ ರೂಪಿಸಿ ಮಸೀದಿ ಆಡಳಿತ ಮಂಡಳಿಗೆ ಈ ಬಗ್ಗೆ ಶಿಫಾರಸು ಪತ್ರವೂ ನೀಡಲಾಗಿತ್ತು.

ಇದೀಗ ಡಾಮರೀಕರಣ ಸೂಕ್ತ ವೆಂದು ಮನಗಂಡು ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ. ಗೂನಡ್ಕ ವತಿಯಿಂದ ಕೊಡುಗೆ ಯಾಗಿ ಪಾರ್ಕಿಂಗ್ ಸ್ಥಳವನ್ನು ಡಾಮರೀಕರಣ ಮಾಡಲಾಯಿತು.

ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ಗೂನಡ್ಕ ಕಾರ್ಯಕರ್ತರು ಶ್ರಮದಾನ ಮೂಲಕ ಬೋಲ್ಡ್ರಸ್ ಕಲ್ಲುಗಳನ್ನು ಹಾಸಲಾಯಿತು.

ಜಮಾಅತ್ ಅಧ್ಯಕ್ಷ ಹಾಜಿ ಉಮ್ಮರ್ ಪಿ ಎ, ಅಲ್ ಅಮೀನ್ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ಮಾರ್ಗದರ್ಶನ ನೀಡಿದರು.ಜಮಾಅತ್ ಆಡಳಿತ ಮಂಡಳಿ ಸದಸ್ಯರು,ಅಲ್ ಅಮೀನ್ ಪದಾಧಿಕಾರಿಗಳು ಸಹಕರಿಸಿದರು.

Leave A Reply

Your email address will not be published.