ಸುಳ್ಯ |ಹೊರರಾಜ್ಯಗಳಿಂದ ಬಂದ 14ಮಂದಿಗೆ ಕ್ವಾರಂಟೈನ್

ವರದಿ : ಹಸೈನಾರ್ ಜಯನಗರ

ಹೊರರಾಜ್ಯಗಳಿಂದ ಬಂದ 14ಮಂದಿ ಸುಳ್ಯದಲ್ಲಿ ಕೋರಂಟೇನ್
ಉದ್ಯೋಗಕ್ಕೆಂದು ಹೊರರಾಜ್ಯಗಳಿಗೆ ತೆರಳಿ ಇದೀಗ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗೆ ಹಿಂದಿರುಗಿದಾಗ ಸುಳ್ಯ ತಾಲೂಕಿನ ಸುಮಾರು 13 ಮಂದಿಯನ್ನು ಸುಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ದೇವರಾಜುಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯ ದಲ್ಲಿ ತಾಲೂಕು ಆಡಳಿತದಿಂದ ಕೋರಂಟೇನ್ ಗೆ ಒಳಪಡಿಸಲಾಗಿದೆ. ಇವರಲ್ಲಿ ಓರ್ವರು ಬಂಟ್ವಾಳ ಮೂಲದವರಾಗಿದ್ದು ಮುಂಬೈಯಿಂದ ಬರುತ್ತಿದ್ದವರ ಜೊತೆಯಲ್ಲಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕೂಡ ಸುಳ್ಯದಲ್ಲಿ ಕೋರಂಟೇನ್ ಗೆ ಒಳಪಡಿಸಲಾಗಿದೆ.

ಮುಂಬೈಯಿಂದ ಬಂದವರಲ್ಲಿ 2 ವರ್ಷದ ಮಗು ಕೂಡ ಒಳಗೊಂಡಿರುತ್ತದೆ. ಇವರ ಪೈಕಿ ನೆಲ್ಲೂರು ಕೆಮ್ರಾಜೆ ನಿವಾಸಿಗಳು ಮೂವರು, ಮೂರೂರು ಭಾಗದ ಒಬ್ಬ ವ್ಯಕ್ತಿ ಮುಳ್ಯ ನಿವಾಸಿ ಒಬ್ಬ ವ್ಯಕ್ತಿ ಯಾಗಿರುತ್ತಾರೆ.

ಇವರುಗಳನ್ನು ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ಇರಿಸಲಾಗಿದೆ. ಇನ್ನು ತಮಿಳುನಾಡು ಕಡೆಯಿಂದ ಬಂದ 7 ಮಂದಿಯನ್ನು ಪಕ್ಕದಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ಇರಿಸಲಾಗಿದ್ದು ಈ ಏಳು ಮಂದಿ ತಮಿಳುನಾಡಿನ ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಒಟ್ಟಿಗೆ ಉದ್ಯೋಗವನ್ನು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ತೊಡಿಕಾನ, ಬೆಳ್ಳಾರೆ ಭಾಗದ ತಲಾ ಒಬ್ಬ ವ್ಯಕ್ತಿಗಳು ಆಗಿದ್ದು ಸುಳ್ಯ ನಗರ ಹಳೆಗೇಟು ಪರಿಸರದ ಇಬ್ಬರು, ಈಶ್ವರಮಂಗಲ ಗ್ರಾಮದ ಒಬ್ಬ ವ್ಯಕ್ತಿ ಯಾಗಿರುತ್ತಾರೆ. ತಾಲೂಕು ಆಡಳಿತದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಇವರು 14 ದಿನಗಳ ಕಾಲ ಕೋರಂಟೇನ್ ಪೂರ್ತಿ ಗೊಳಿಸಬೇಕಾಗಿದೆ‌. ಇವರು ಯಾರೂ ಕೂಡ ಶಂಕಿತ ಇರುವುದಿಲ್ಲ. ತಮಿಳುನಾಡು ಮಹಾರಾಷ್ಟ್ರ ಭಾಗಗಳಲ್ಲಿ ಕೋವಿಡ್ 19 ಹೆಚ್ಚಿಗೆ ಕಂಡುಬಂದ ಕಾರಣಕ್ಕೆ ಮುಂಜಾಗ್ರತಾ ವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.