ಪಂಪ್ವೆಲ್ ಫ್ಲೈಓವರ್ ಮೇಲೆ ಅಪಘಾತ| ಟೆಂಪೋ ಚಾಲಕ ಗಂಭೀರ

ಮಂಗಳೂರು: ಪಂಪ್‌ವೆಲ್ ಫ್ಲೈ ಓವರ್‌ ಮೇಲೆ ಇಂದು ಬೆಳಗಿನ ಜಾವ ತರಕಾರಿ ಸಾಗಿಸುತ್ತಿದ್ದ ದೋಸ್ತ್ ವಾಹನವೊಂದು ಟಿಪ್ಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತರಕಾರಿ ಸಾಗಣೆ ವಾಹನದ ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಿಂದ ತರಕಾರಿ ಮೂಟೆಗಳನ್ನು ಹೇರಿಕೊಂಡು ಕಾಸರಗೋಡಿಗೆ ತೆರಳುತ್ತಿದ್ದ ದೋಸ್ತ್ ವಾಹನ ಪಂಪ್‌ವೆಲ್ ಫ್ಲೈ ಓವರ್‌ ಮೇಲೆ ಟಿಪ್ಪರ್ ಒಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ತರಕಾರಿ ಸಾಗಣೆ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಒಳಗೆ ಸಿಕ್ಕಿಹಾಕಿಕೊಂಡಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಇತರ ವಾಹನಗಳ ಚಾಲಕರು ಮತ್ತು ಕೆಲವು ಸಾರ್ವಜನಿಕರು ಸೇರಿಕೊಂಡು ತರಕಾರಿ ಸಾಗಣೆ ವಾಹನದ ಒಳಗೆ ಸಿಕ್ಕಿಬಿದ್ದ ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿ ಕೇಸು ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.