ಗೆಳೆಯರ ಪಾರ್ಟಿಯಲ್ಲಿ ಕಡಿಮೆ ಹಣ ನೀಡಿ ಹೆಚ್ಚು ಮದ್ಯ ಬಗ್ಗಿಸಿಕೊಂಡ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ
ಇದು ಮೇ 4 ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾದ ನಂತರದ ಘಟನೆ. ಮೇ 6 ರಂದು ಮೂವರು ಗೆಳೆಯರಾದ ಸುಜಿತ್, ರಾಜೇಶ್ ಮತ್ತು ಕಿಶೋರ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಮೂವರೂ ಒಂದಿಷ್ಟು ಹಣ ಹಾಕಿ ಮದ್ಯ ಖರೀದಿಸಿದ್ದರು. ಪಾರ್ಟಿಯಲ್ಲಿ ಕಿಶೋರ್ ಎಂಬಾತ ಹೆಚ್ಚು ಮದ್ಯ ಬಗ್ಗಿಸಿಕೊಂಡು ಕುಡಿದಿದ್ದ. ಪಾರ್ಟಿ ಕಳೆಗಟ್ಟುತ್ತಿರುವಾಗ ಮಧ್ಯೆ ಎಣ್ಣೆ ಶಾರ್ಟೆಜ್ ಆಗಿತ್ತು.
ಆಗ ಸಣ್ಣಗೆ ಜಗಳ ಶುರವಾಯಿತು. ಕಿಶೋರ್ ನು ಮದ್ಯ ಖರೀದಿಗೆ ಹೆಚ್ಚು ಹಣ ನೀಡಿಲ್ಲ, ಆದರೆ ಜಾಸ್ತಿ ಮದ್ಯ ಕುಡಿದಿದ್ದಾನೆ ಎಂದು ರಾಜೇಶ್ ಮತ್ತು ಸುಜಿತ್ ಕ್ಯಾತೆ ತೆಗೆದಿದ್ದಾರೆ. ಜಗಳ ಹೊತ್ತಿಕೊಂಡಿದೆ. ಕಮ್ಮಿ ಹಣ ನೀಡಿ ಜಾಸ್ತಿ ಮದ್ಯ ಯಾಕೆ ಕುಡಿದೆ ? ಎಂದು ಕಿಶೋರ್ ನನ್ನು ಉಳಿದಿಬ್ಬರು ತರಾಟೆಗೆ ತೆಗೆದು ಕೊಂಡಿದ್ದಾರೆ.
ಕೊನೆಗೆ ಕಮ್ಮಿ ಹಣ ನೀಡಿ ಜಾಸ್ತಿ ಮದ್ಯ ಕುಡಿದ ಇದೇ ಕ್ಷುಲ್ಲಕ ಕಾರಣಕ್ಕೆ ಕೊಲೆಯೆಂದು ನಡೆದುಹೋಗಿದೆ. ರಾಜೇಶ್ ಮತ್ತು ಸುಜಿತ್ ಸೇರಿಕೊಂಡು ಗೆಳೆಯ ಕಿಶೋರ್ ನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.