ಹಿರಿಯ ಪತ್ರಕರ್ತೆ ಸೀತಾಲಕ್ಷ್ಮೀ ಕರ್ಕಿಕೋಡಿ ನಿಧನ

ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕಿಯಾಗಿದ್ದ,ಹಿರಿಯ ಲೇಖಕಿ ಸೀತಾಲಕ್ಷ್ಮೀ ಕರ್ಕಿಕೋಡಿ ನಿಧನರಾದರು .ಎರಡು ವರ್ಷಗಳಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಹೊನ್ನಾವರ ತಾಲೂಕಿನ ಹಿರಿಯ ಸಾಹಿತಿ ವಿ.ಗ.ನಾಯಕ ಹಾಗೂ ಶ್ಯಾಮಲಾ ಕರ್ಕಿಕೋಡಿ ದಂಪತಿಯ ಪುತ್ರಿ.

ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ನಡೆಸಿದ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಹೆಚ್‍ಡಿ ಪದವಿ ಪ್ರದಾನಿಸಿ ಗೌರವಿಸಿತ್ತು.

ಖ್ಯಾತ ವಿದ್ವಾಂಸ, ಸಂಶೋಧಕ, ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸೀತಾಲಕ್ಷ್ಮೀ ಕರ್ಕಿಕೋಡಿ ಪ್ರಬಂಧವನ್ನು ಮಂಡಿಸಿದ್ದರು.

ಇದು ಸೀತಾಲಕ್ಷ್ಮೀ ಅವರಿಗೆ ಸಂದ ಎರಡನೇ ಡಾಕ್ಟರೇಟ ಪದವಿಯಾಗಿದೆ. ಈ ಹಿಂದೆ 2004ರಲ್ಲಿ  ಮಾಸ್ತಿ ಅವರ ಕಥೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣದ ಬಗ್ಗೆ ಹೆಸರಾಂತ ಸಂಶೋಧಕ  ಡಾ.ಮೋಹನ ಕುಂಟಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಹಂಪಿ ವಿಶ್ವ ವಿದ್ಯಾಲಯಕ್ಕೆ ಮಹಾ ಪ್ರಬಂಧ ಸಲ್ಲಿಸಿ ಪಿಹೆಚ್‍ಡಿ ಪದವಿ ಪಡೆದಿದ್ದರು.  

ರಂಗಕರ್ಮಿ ಸದಾನಂದ ಸುವರ್ಣರ ಸಾಧನೆ ಹಿನ್ನೆಲೆಯಲ್ಲಿ ಡಾ. ಜಿ.ಎನ್.ಉಪಾಧ್ಯರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಮುಂಬಯಿ ವಿವಿಯಿಂದ ಎಂಫಿಲ್ ಪದವಿ ಗಳಿಸಿಕೊಂಡಿದ್ದರು.

ವೃತ್ತಿಯಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕಿಯಾಗಿರುವ ಸೀತಾಲಕ್ಷ್ಮೀ ನಿರಂತರವಾದ ಓದು , ಬರೆಹ, ಸಂಪಾದನೆ, ಸಾಂಘಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಪರಾಮರ್ಶೆ, ಮುಕ್ತಮಾತು, ಆ ಕ್ಷಣದಲ್ಲಿ , ರಂಗಕರ್ಮಿ ಸದಾನಂದ ಸುವರ್ಣ , ಸುವರ್ಣ ಸಂಪದ, ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದ ರಂಗಚೇತನ ಸದಾನಂದ ಸುವರ್ಣ,  ಕಮಲಾದೇವಿ ಚಟ್ಟೋಪಾಧ್ಯಾಯ, ವಿ.ಬಿ.ಅರ್ತಿಕಜೆ…ಮುಂತಾದ ಹತ್ತಾರು ಕೃತಿಗಳನ್ನು ರಚಿಸಿರುವ ಅವರು ಒಳ್ಳೆಯ ವಿಮರ್ಶಕಿ. ನಿಷ್ಠೆ ಹಾಗೂ ಶ್ರದ್ಧೆಯಿಂದ ಸಂಶೋಧನೆ ನಡೆಸಿದ್ದಾರೆ.

ಪತ್ರಿಕೋದ್ಯಮದ ಸೇವೆಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಸಾಹಿತ್ಯಕ ಕೆಲಸಗಳಿಗೆ ಜೆಡಿಎನ್ ಪ್ರಶಸ್ತಿ ಪಡೆದಿ‌ದ್ದಾರೆ. 

ಸೀತಾಲಕ್ಷ್ಮೀ ಅಡ್ಯನಡ್ಕ ಬಳಿಯ ಕೇಪು ಕಲ್ಲಂಗಳದವರು. ಅಡ್ಯನಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಡಿಗ್ರಿ ಪಡೆದರು.
ನಂತರ ಕನ್ನಡದಲ್ಲಿ ಎಂ ಎ ಮಾಡಿದರು. ಬಳಿಕ ಡಾಕ್ಟರೇಟ್ ಪದವಿ ಪಡೆದರು.

ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ‌ ಉಪ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದರು.

ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿಯವರು,ಇವರ ತಂದೆ ಶಿಕ್ಷಕ ವೃತ್ತಿ ಸೇರಿದ ಬಳಿಕ ದ.ಕ.‌ದ ಅಡ್ಯನಡ್ಕಕ್ಕೆ ಬಂದಿದ್ದರು.

ಸೀತಾ ಲಕ್ಚ್ಮಿ ಅವರ ಹುಟ್ಟು, ಬಾಲ್ಯ, ಬದುಕು ದ.ಕ. ದಲ್ಲೇ ಸಾಗಿತ್ತು.
ಪ್ರತಿಭಾನ್ವಿತೆಯಾಗಿದ್ದ ಸೀತಾ, ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು.

Leave A Reply

Your email address will not be published.