20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ | ಮೇ.18ರಿಂದ ಲಾಕ್‌ಡೌನ್ 4.0 ಹೊಸರೂಪದಲ್ಲಿ..


ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದರು. ಇದು ಇತಿಹಾಸ ಕಂಡು ಕೇಳರಿಯದ ದೈೈತ್ಯ ಪ್ಯಾಕೆೆಜ್.

ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ಯಾಕೇಜ್ ಭೂಮಿಗೆ, ಹಂದ ಹರಿವಿಗೆ, ಸಣ್ಣ ಉದ್ದಿಮೆಗಳ ನೆರವಿಗೆ ಈ ಪ್ಯಾಕೇಜ್. ಶ್ರಮಿಕರಿಗೆ, ರೈತರಿಗೆ, ಕಾರ್ಮಿಕರಿಗೆ, ಹಗಲಿರುಳೂ ದುಡುಯುವವರಿಗೆ, ಮಾಧ್ಯಮ ವರ್ಗಕ್ಕೆ ವಿಶೇಷ ಪ್ಯಾಕೇಜ್ ಹಣ ವಿನಿಯೋಗವಾಗಲಿದೆ. ಬಡವರ, ರೈತರ ಜೇಬಿಗೆ ನೇರವಾಗಿ ಹಣ ಬೀಳಲಿದೆ.

ಪ್ಯಾಕೇಜ್ ವಿವರವನ್ನು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹಂತ ಹಂತವಾಗಿ ನೀಡಲಿದ್ದಾರೆ ಎಂದರು.
ಸಕಾರಾತ್ಮಕವಾಗಿ ಹೋರಾಡಿದರೆ ಕೊರೋನಾ ವಿರುದ್ಧ ಜಯ ಸಿಗಲಿದೆ. ಇಡೀ ವಿಶ್ವಕ್ಕೆ ನಾವು ಮಾದರಿಯಾಗಬೇಕಾಗಿದೆ. ಸ್ವಾವಲಂಬಿ ಭಾರತಕ್ಕೆ ನಾಂದಿ ಹಾಡಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಕೊರೋನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿ ಭಾರತ ಮುನ್ನುಗ್ಗುತ್ತಿದೆ. ಈ ಬಗ್ಗೆ ಇಡೀ ವಿಶ್ವವೇ ಅಚ್ಚರಿಪಡುತ್ತಿದೆ.
ಭಾರತದ ಸಂಕಲ್ಪ ಶಕ್ತಿ, ಪೂರೈಕೆ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮೋದಿ ಸಲಹೆ ನೀಡಿದರು.
ಕೊರೋನಾ ವಿರುದ್ಧದ ಹೋರಾಟಕ್ಕೆ ನಾಲ್ಕು ತಿಂಗಳು ಕಳೆದಿದೆ. ಒಂದೇ ಒಂದು ವೈರಸ್ ಇಡೀ ಜಗತ್ತನ್ನೇ ಸಂಕಷ್ಟಕ್ಕೆ ದೂಡಿದೆ. ಅಲ್ಲೋಲಕಲ್ಲೋಲ ಮಾಡಿದೆ. 42 ಲಕ್ಷ ಜನರು ಕೊರೋನಾ ಪೀಡಿತರಾಗಿದ್ದಾರೆ. ಭಾರತದಲ್ಲೂ ಹಲವರು ತಮ್ಮ ಬಂಧುಗಳನ್ನು ಕಳೆದುಕೊಂಡಿದ್ದಾರೆ. ಇದು ಕೊರೋನಾ ಮಾನವ ಕುಲಕ್ಕೆ ಕಲ್ಪನಾತೀತ ಸನ್ನಿವೇಶ ಸೃಷ್ಟಿಸಿದೆ. ನಾವು ಉಳಿಯಬೇಕಾಗಿದೆ, ಮುಂದೆ ಸಾಗಬೇಕಾಗಿದೆ ಎಂದು ಮೋದಿ ಹೇಳಿದರು.

ಕೊರೋನಾ ವಿಶ್ವದ ಆರ್ಥಿಕತೆಯಲ್ಲಿ ಗಣನೀಯ ಬದಲಾವಣೆ ತರುತ್ತಿದೆ. ಈ ವೇಳೆಯಲ್ಲಿ ಭಾರತದ ಅಭಿವೃದ್ಧಿ ವಿಶ್ವದ ಅಭಿವೃದ್ಧಿ ಎಂಬುದು ಸಾಬೀತಾಗಲಿದೆ. ಭಾರತದಲ್ಲಿರುವಷ್ಟು ಪ್ರತಿಭೆಗಳು ಇನ್ನೆಲ್ಲೂ ಇಲ್ಲ. ಟಿಬಿ, ಅಪೌಷ್ಟಿಕತೆ, ಪೋಲಿಯೋ ವಿರುದ್ಧ ಭಾರತ ಯಶಸ್ವಿಯಾಗಿ ಹೋರಾಡಿದೆ. ಭಾರತ ಈಗ ಗುಲಾಮಿ ಮನಸ್ಥಿತಿಯಿಂದ ಹೊರಬಂದಿದೆ ಎಂದರು.

Leave A Reply

Your email address will not be published.