ಲಾಕ್ಡೌನ್ ಹಿನ್ನಲೆ | ಜೆಸಿಐ ಬೆಳ್ಳಾರೆ ವತಿಯಿಂದ ಮಹತ್ಕಾರ್ಯ | ಕರ್ತವ್ಯನಿರತ ಸರಕಾರಿ ಅಧಿಕಾರಿಗಳಿಗೆ ಆಹಾರದ ವ್ಯವಸ್ಥೆ

ಬೆಳ್ಳಾರೆ ಜೆಸಿಐ ಕಳೆದ 33 ವರ್ಷಗಳಿಂದ ಬೆಳ್ಳಾರೆ ವ್ಯಾಪ್ತಿಯಲ್ಲಿ ಹಲವಾರು ಸಮಾಜ ಸೇವಾ ಕೆಲಸಗಳನ್ನು ಮಾಡುತ್ತಾ ಬಂದಿದೆ.
ಕೋವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ಹೋಟೆಲ್ ಗಳು ಬಂದ್ ಇರುವ ಕಾರಣ ಸರಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಕಛೇರಿ ಸಮಯದಲ್ಲಿ ಆಹಾರಕ್ಕಾಗಿ ಕಷ್ಟಪಡುವುದನ್ನು ಮನಗಂಡ ಬೆಳ್ಳಾರೆ ಜೆಸಿಐಯು ಜೇಸಿ ಪೂರ್ವಧ್ಯಕ್ಷರು, ಸದಸ್ಯರು, ಆಹಾರ ವ್ಯವಸ್ಥೆಗೆ ಕೈಹಾಕಿದರು. ಇವರುಗಳ ನೇತೃತ್ವದಲ್ಲಿ ಕೆಲವು ಊರ ದಾನಿಗಳ ಸಹಕಾರದೊಂದಿಗೆ ಬೆಳ್ಳಾರೆ ವ್ಯಾಪ್ತಿಗೆ ಬರುವ ಸರಕಾರಿ ಕಛೇರಿ ಸಿಬ್ಬಂದಿಗಳಿಗೆ ಚಹಾ, ತಿಂಡಿ ಊಟದ ವ್ಯವಸ್ಥೆಯನ್ನು ಬೆಳ್ಳಾರೆಯ ಸಚಿನ್ ಹೋಟೆಲ್ ನಲ್ಲಿ ಮಾಡಲಾಗಿತ್ತು.

ಆರಂಭದ ಕೆಲವು ದಿನಗಳ ಬಳಿಕ ಕಾರಣಾಂತರಗಳಿಂದ ಉಚಿತ ಆಹಾರದ ವ್ಯವಸ್ಥೆ ಮೂರು ದಿನದ ಮಟ್ಟಿಗೆ ನಿಂತು ಹೋಗಿತ್ತು.

ನಂತರ ಗೃಹರಕ್ಷಕ ದಳದ ಕಮಾಂಡೆಂಟ್ ಮುರಳಿಮೋಹನ್ ಚೂಂತಾರ್ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅಹಾರದ ವ್ಯವಸ್ಥೆಯು ಬೆಳ್ಳಾರೆ ಅಜಪಿಲ ದೇವಸ್ಥಾನದಲ್ಲಿ ಮುಂದುವರೆಯುವಂತೆ ಮಾಡಿದರು.

ದಾನಿಗಳ ಸಹಕರಕ್ಕಾಗಿ ಮನವಿ

ಆಹಾರ ಪೂರೈಕೆಯ ವ್ಯವಸ್ಥೆಗೆ ಒಂದು ದಿನದ ಆಹಾರದ ಖರ್ಚು ಸುಮಾರು 5000 ರೂ. ಆಗುತ್ತಿದೆ.
ಜೆ.ಸಿ.ಐ ಮುಂದಾಳತ್ವದಲ್ಲಿ ಅಜಪಿಲ ದೇವಸ್ಥಾನ, ಬೆಳ್ಳಾರೆ ಗ್ರಾ.ಪಂ., ಮೆಸ್ಕಾಂ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಸ್ಥಳಿಯ ಸಹಕಾರಿ ಸಂಘ ಹಾಗು ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಆಹಾರದ ವ್ಯವಸ್ಥೆಯು ಕಳೆದ 25 ದಿನಗಳಿಂದ ಸರಾಗವಾಗಿ ನಡೆದಿದೆ.
ಲಾಕ್ಡೌನ್ ಕೊನೆಗೊಳ್ಳುವವರೆಗೆ ಈ ಸೇವೆಯನ್ನು ಮುಂದುವರೆಸುವ ಉದ್ದೇಶದಿಂದ ಊರ ಸಹೃದಯಿ ದಾನಿಗಳು ಸಹಕಾರ ನೀಡುವಂತೆ ವ್ಯವಸ್ಥಾಪಕರು ಮನವಿ ಮಾಡಿರುತ್ತಾರೆ.

Leave A Reply

Your email address will not be published.