ಕಡಲ ಕಿನಾರೆಯಲ್ಲಿ ಕಳವಳ | ಮಂಗಳೂರಿನಲ್ಲಿ ಮತ್ತೊಂದು ಕೋರೋಣ ಪಾಸಿಟಿವ್

ಮಂಗಳೂರು, ಮಾ 13: ದಕ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಮಂಗಳೂರಿನ ಸೋಮೇಶ್ವರದ ಮಹಿಳೆಗೆ ‌ಕೊರೋನಾ ಸೋಂಕು ಇರುವುದು ಇಂದು ದೃಢಪಟ್ಟಿದೆ.

ಈ ಪ್ರಕರಣದ ಮೂಲವೂ ಜಿಲ್ಲೆಯ ಕೊರೊನಾ ಸ್ಪ್ರೆಡ್ ಸ್ಪಾಟ್ ಎಂದೇ ಕರೆಯಲ್ಪಡುವ ಫಸ್ಟ್ ನ್ಯೂರೋ ಆಸ್ಪತ್ರೆಯೇ ಆಗಿದೆ ಎನ್ನುವುದು ಆತಂಕ ಉಂಟು ಮಾಡುವ ಸಂಗತಿಯಾಗಿದೆ. ಇಂದು ಕೊರೊನಾ ಸೋಂಕು ದೃಢಪಟ್ಟ ಮಹಿಳೆಯೂ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಮಂಗಳೂರಿನ ಉಳ್ಳಾಲ ಬಳಿಯ ಸೋಮೇಶ್ವರದಲ್ಲಿ ಈಗಾಗಲೇ ಸೀಲ್ ಡೌನ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಪೊಲೀಸರು ಮತ್ತು ಜಿಲ್ಲಾಡಳಿತ ಅಗತ್ಯ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಇವತ್ತಿನ ಸೋಂಕಿತ ಮಹಿಳೆಯನ್ನು ಒಳಗೊಂಡು ದಕ್ಷಿಣ ಕನ್ನಡದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.