ಸುಳ್ಯ|ರಂಜಾನ್ ತಿಂಗಳ 17ರ ಬದರ್ ದಿನದ ಪ್ರಯುಕ್ತ ಅನ್ನದಾನ

ವರದಿ : ಹಸೈನಾರ್ ಜಯನಗರ

ಪವಿತ್ರ ರಂಜಾನ್ ತಿಂಗಳ 17ರ ದಿನದಂದು ಬದರ್ ದಿನಾಚರಣೆಯ ಪ್ರಯುಕ್ತ ಗಾಂಧಿನಗರ ಆಶ್ರಯ ತಂಡದ ಸದಸ್ಯರುಗಳ ನೇತೃತ್ವದಲ್ಲಿ ಸ್ಥಳೀಯ ಗಾಂಧಿನಗರ ದಾನಿಗಳ ಸಹಕಾರದೊಂದಿಗೆ ಅನ್ನದಾನ ವಿತರಣೆ ಕಾರ್ಯಕ್ರಮ ಮೇ10ರಂದು ನಡೆಯಿತು .

ಸುಳ್ಯ ನಗರದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಯ ಮನೆಗಳಿಗೆ ಅನ್ನದಾನ ವಿತರಿಸುವ ಕಾರ್ಯಕ್ರಮ ನಡೆಯಿತು .

ಪವಿತ್ರ ರಂಜಾನ್ ತಿಂಗಳು ಪುಣ್ಯದ ಮಾಸವಾದ ಹಿನ್ನೆಲೆಯಲ್ಲಿ ಪ್ರಪಂಚಕ್ಕೆ ಬಂದಿರುವಂತಹ ಕೋರೋನಾ ವೈರಸ್ ಎಂಬ ಮಹಾಮಾರಿಯು ತೊಲಗಿ ವಿಶ್ವಶಾಂತಿ ಬೆಳಗಲಿ ಎಂದು ಪ್ರತ್ಯೇಕವಾದ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನ ಪಂ ಸದಸ್ಯ ಶರೀಫ್ ಕಂಠಿ, ರಜಾಕ್ ಪುತ್ತುಚ್ಚ, ಹಮೀದ್ ಕುತ್ತಮೊಟ್ಟೆ, ರಜಾಕ್ , ರಫೀಕ್ B M A, ಸಾಜಿದ್ ನಾವೂರು. ಫಾರಿಸ್ ನಾವೂರು. ಶರೀಫ್ ಮರಿಯ,ಮುನಾಫರ್ ಮುನ, ಬಶೀರ್ KM, ಹಮೀದ್ (Choice) ರಹೀಮ್ FZ. ರಶೀದ್ ಕಟ್ಟೆಕಾರ್, ಮರ್ಜೂಕ್ ಮಾಸ್ಟರ್, ಮುಸ್ತಫ ಪಂಡಿತ್, ಸಿದ್ದೀಕ್ ಫ್ರೂಟ್, ಮನ್ಸೂರ್ ಮೆಟ್ರೋ, ಅಬೂಬಕ್ಕರ್ M T ಭಾತೀಶ ಅರುವ.
ಆಶ್ರಯ ತಂಡದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಗಾಂಧಿನಗರ ನಾವೂರು ಹಾಗೂ ಸ್ಥಳೀಯ ಯುವಕರಿಗೆ ಅಭಿನಂದನೆಗಳನ್ನು ಸಂಘಟಕರ ವತಿಯಿಂದ ಸಲ್ಲಿಸಲಾಯಿತು.

Leave A Reply

Your email address will not be published.