ಮಂಗಳೂರಿನಲ್ಲಿ ಇಂದು ಮತ್ತೆರಡು ಕೋರೋನಾ ಪಾಸಿಟಿವ್

ಕಡಲ ತೀರದ ನಗರ ಮಂಗಳೂರಿನಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್.

ಇವರು ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗಳಾಗಿದ್ದು ಫಸ್ಟ್ ‌ನ್ಯೂರೋ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದೆ.

ಪೇಷಂಟ್ 507 ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಸುಮಾರು 50 ವರ್ಷದ ಮಹಿಳೆಯ 12ನೇ ದಿನದ ಗಂಟಲು ಪರೀಕ್ಷೆ ವರದಿ ಸ್ವೀಕೃತವಾಗಿದ್ದು ಇವರಿಗೆ ಕೊರೊನಾ ಕಂಡುಬಂದಿದೆ. ಹಾಗೂ ಇವರ ಸಂಪರ್ಕದಲ್ಲಿದ್ದು ಸುಮಾರು 26 ವರ್ಷದ ವ್ಯಕ್ತಿಯ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಆಗಿರುವುದು ದೃಢವಾಗಿದೆ.

ಫಸ್ಟ್ ‌ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇವರನ್ನು ಮಂಗಳೂರಿನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಹೀಗಾಗಿ ಉಡುಪಿ ಮೂಲದವರಾದರೂ ಇವರು ದ.ಕ ಜಿಲ್ಲೆಯ ಕೊರೊನಾ ಪ್ರಕರಣಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹಾಗಾಗಿ ಇಲ್ಲಿಯವರೆಗೆ ದಕ್ಷಿಣ ಕನ್ನಡದಲ್ಲಿ ಒಟ್ಟು 33 ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ.

Leave A Reply

Your email address will not be published.