ಬೆಳ್ತಂಗಡಿ | ಆಕಸ್ಮಿಕವಾಗಿ ಹಟ್ಟಿಗೆ ತಗುಲಿದ ಬೆಂಕಿ | ಗಾಯಗೊಂಡ ಗೋವಿನ ಶುಶ್ರೂಷೆ,ಹಟ್ಟಿ ರಿಪೇರಿಗೆ ಹರೀಶ್ ಪೂಂಜ ನೆರವು

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಕೋಡ್ಯೆಲು ಇಲ್ಲಿನ ನಿವಾಸಿ ಶ್ರೀ ಪ್ರವೀಣ್ ಅವರ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು, ಬೆಂಕಿಯಿಂದ ಅವರ ಮನೆಯ ಗೋವುಗಳಿಗೂ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ.

ಶಾಸಕ ಹರೀಶ್ ಪೂಂಜರು ಮೇ 12 ರಂದು ಸಂತ್ರಸ್ತರ ಮನೆಗೆ ಭೇಟಿ ನೀಡಿದರು. ಈ ಮಳೆಗಾಲಕ್ಕೆ ಮುಂಚಿತವಾಗಿ ಕೊಟ್ಟಿಗೆ ರಿಪೇರಿ ಮಾಡಿಸುವುದಕ್ಕೆ ಹಾಗೂ ಗೋವುಗಳ ಶುಶ್ರೂಷೆಗಾಗಿ ಧನ ಸಹಾಯ ನೀಡಿದರು.

ತನ್ನ ಕ್ಷೇತ್ರದ ಜನತೆಯ ಸಂಕಷ್ಟಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವ ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Leave A Reply

Your email address will not be published.