ಬೆಳ್ಳಾರೆ | ಮಕ್ಕಳೇ ಮರದ ಮೇಲೊಂದು ಮನೆಯ ಮಾಡಿದರು

ಲಾಕ್ ಡೌನ್ ನ ಹಲವು ದಿನದ ಕಡ್ಡಾಯ ರಜೆಯನ್ನು ವಿದ್ಯಾರ್ಥಿಗಳು ಟಿವಿ ಮೊಬೈಲ್ ಎಂದು ಹಲವು ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಬೇರೆಯದೇ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಾರೆ.

ಹೌದು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ತಡಕಜೆ ಎಂಬಲ್ಲಿ ಎಂಟನೆಯ ತರಗತಿಯ ಪುಟ್ಟ ವಿದ್ಯಾರ್ಥಿಗಳು ಸುತ್ತಲೂ ಹಸಿರಿನಿಂದ ಕೂಡಿರುವ ತಂಪಾದ ಗಾಳಿ ಬೀಸುವ ಸುಂದರ ಪರಿಸರದಲ್ಲಿ ಮರದ ಕೊಂಬೆ ರೆಂಬೆಗಳನ್ನು ಉಪಯೋಗಿಸಿಕೊಂಡು ಮರದ ಮೇಲೆ ಒಂದು ಚಿಕ್ಕ ಮನೆಯನ್ನು ನಿರ್ಮಾಣ ಮಾಡಿದ್ದಾರೆ.

ತಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಒಂದು ಚಿಕ್ಕ ಗುಡಿಸಲನ್ನು ನಿರ್ಮಿಸಿದ್ದಾರೆ. ಆದರೆ ರಜೆ ಸಿಕ್ಕಾಗ ಮೊಬೈಲ್, ಟಿವಿ ಎಂದು ಅದರಲ್ಲಿ ತೇಲಾಡುತ್ತಿರುವ ಕಾಲದಲ್ಲಿ ಇಲ್ಲಿ ಮೂರು ಜನ ವಿದ್ಯಾರ್ಥಿಗಳು ಸೇರಿಕೊಂಡು ಲಾಯಿಳೊಟ್ ಕೆಲಸ ಅಂತ ಹೊರಟದ್ದು ಕೊನೆಗೆ ಮರಗಳ ಮೇಲೆ ಒಂದು ಪುಟ್ಟ ಗುಡಿಸಲು ನಿರ್ಮಾಣ ಆಗಿ ನಿಂತಿದೆ.

ಮರದ ರೆಂಬೆ ಕೊಂಬೆಗಳನ್ನು ಕೋಲುಗಳನ್ನು ಉಪಯೋಗಿಸಿ ಮೇಲಕ್ಕೆ ಹತ್ತಲು ಮರದಿಂದ ಮಾಡಿದ ಏಣಿ, ಹಾಗೆಯೇ ದ್ವಿಚಕ್ರವಾಹನದ ಚಕ್ರವನ್ನು ಉಪಯೋಗಿಸಿ ಮಾಡಿ ನಿರ್ಮಾಣ ಮಾಡಿದ ಜೋಕಾಲಿ, ವಿದ್ಯಾರ್ಥಿಗಳು ಮಾತ್ರ ನಿಲ್ಲಬಲ್ಲ ಅಟ್ಟನಿಗೆ. ಪೂರ್ತಿ ವಿದ್ಯಾರ್ಥಿ ಗಳೇ ನಿರ್ಮಿಸಿದ ಮರದ ಮನೆ ಇದಾಗಿದೆ.

ಸಾಮಾನ್ಯವಾಗಿ ಮಕ್ಕಳು ಮಾಡುವ ಕಾರ್ಯದಲ್ಲಿ ದೊಡ್ಡವರು ಒಂದಷ್ಟು ಹಸ್ತಕ್ಷೇಪ ( ?!) ಮಾಡುತ್ತಾರೆ. ಆದರೆ ಈ ಹಟ್ ಸಾಕಷ್ಟು ರಾ ಆಗಿದ್ದು, ನಿಜಕ್ಕೂ ಮಕ್ಕಳೇ ಮಾಡಿದಂತಿದೆ. ಅದುವೇ ಇಲ್ಲಿನ ವಿಶಿಷ್ಟತೆ. ಮಕ್ಕಳಿಂದ ನಾವು ವೃತ್ತಿಪರ ರು ಮಾಡುವಂತಹ ನಾಜೂಕಿನ ಕೆಲಸವನ್ನು ನಿರೀಕ್ಷಿಸುವುದಿಲ್ಲ.

ಮಕ್ಕಳ ದೇ ಲಹರಿಗೆ, ಅವರದೇ ಯೋಚನಾ ರೀತಿಗೆ ಭಂಗಬರದೆ ಅವರು ಮಾಡುವ ಯಾವುದೇ ಕೆಲಸವೂ ಚೆನ್ನಾಗೇ ಕಾಣಿಸುತ್ತದೆ
ಅದೇ ಕಾರಣಕ್ಕೆ ಈ ಮರದ ಮೇಲಿನ ಗುಡಿಸಲು ” ಪೊರ್ಲು ಆತುಂಡ್ ” ಎಂದು ನಾವು ಅನ್ನಬಹುದು.

ಈ ಕಾರ್ಯದಲ್ಲಿ ವಿದ್ಯಾರ್ಥಿಗಳಾದ ಭವಿಷ್ಯ, ಆಕಾಶ್, ಆತ್ಮಿಕ ಆಚಾರ್ಯ ಮತ್ತು ಭಕ್ತಿ ಎಂಬ ಹುಡುಗಿ ಇವರು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 8ನೇ ತರಗತಿ ಓದುವ ವಿದ್ಯಾರ್ಥಿಗಳಾಗಿದ್ದಾರೆ.
ನಿಮಗೆ ಏನಕ್ಕೆ ಇಂತಹ ಮನೆ ತಯಾರಿಸಬೇಕೆಂದು ಅನಿಸಿತು ಎಂದಾಗ, ಟಿವಿಯಲ್ಲಿ ಕಂಡದ್ದನ್ನು ಹೀಗೆ ಪ್ರಯೋಗ ಮಾಡಿದ್ದೇವೆ. ನಮಗೂ ಈ ರಜೆಯಲ್ಲಿ ಏನಾದರೂ ಮಾಡಬೇಕೆನಿಸಿತು ಎಂದು ಮಕ್ಕಳು ಹೇಳುತ್ತಾರೆ.

ನಿರ್ಮಿಸಿದ ಟ್ರೀ ಹೌಸ್ ಕೆಲಸವು ಪೂರ್ತಿಯಾಗಿದ್ದು, ಭಾನುವಾರದಂದು ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಹಿರಿಯರಾದ ಸತ್ಯನಾರಾಯಣ ಎಂಬವರು ರಿಬ್ಬನ್ ತುಂಡರಿಸುವ ಮೂಲಕ ಮರದ ಮನೆಯನ್ನು ಉದ್ಘಾಟಿಸಿದರು.

ಆ ಬಳಿಕ ಗಣ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಡಗಜೆ ಪರಿಸರದ ಹಲವರು ಆಗಮಿಸಿ ವಿದ್ಯಾರ್ಥಿಗಳ ನೂತನ ಪ್ರಯತ್ನಕ್ಕೆ ಶುಭಹಾರೈಸಿದರು. ಆಗಮಿಸಿದ ಎಲ್ಲರಿಗೂ ತಂಪು‌ ಪಾನೀಯದ ವ್ಯವಸ್ಥೆ ಕಲ್ಪಿಸಲಾಗಿತ್ತು.

Leave A Reply

Your email address will not be published.