ಸುಂಟಿಕೊಪ್ಪ|ಹೊಳೆಯಲ್ಲಿ ಮುಳುಗಿ ಯುವಕ ಜಲಸಮಾಧಿ


ಸುಂಟಿಕೊಪ್ಪ: ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿ ತೋಟದ ಕಾರ್ಮಿಕ ಮುರುಗೇಶ್ ಎಂಬುವವರ ಪುತ್ರ ಕೃಷ್ಣ (ಅಪ್ಪಿ) (27) ಎಂಬಾತ ಮೃತ ದುರ್ದೈವಿ. ಸುಂಟಿಕೊಪ್ಪದ ವರ್ಕ್ಸ್ ಶಾಪ್ ವೊಂದರಲ್ಲಿ ಟಿಂಕರಿಂಗ್ ಕೆಲಸ ಮಾಡುತ್ತಿದ್ದ ಅಪ್ಪಿ ಇಂದು ಸಂಜೆ ಗೆಳೆಯರೊಂದಿಗೆ ತೋಟದಿಂದ ಅನತಿ ದೂರದಲ್ಲಿ ಹರಿಯುತ್ತಿರುವ ಹಟ್ಟಿ ಹೊಳೆಗೆ ಹೋಗಿದ್ದಾನೆ. ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ ಈತ ಮೊಬೈಲ್ ನಲ್ಲಿ ಮಾತನಾಡುತ್ತಾ ಉಳಿದವರನ್ನು ಅಲ್ಲಿಯೇ ಬಿಟ್ಟು ಒಬ್ಬನೇ ಹೊಳೆಯತ್ತ ನಡೆದುಕೊಂಡು ಹೋಗಿದ್ದಾನೆ. ಆದರೆ ಎಷ್ಟೇ ಹೊತ್ತಾದರೂ ಆತ ಹಿಂತಿರುಗದ ಕಾರಣ ಸಹವರ್ತಿಗಳು ಹುಡುಕಾಡಿದಾಗ ಹೊಳೆಯಲ್ಲಿ ಮುಳುಗಿರುವುದು ತಿಳಿದುಬಂದಿದೆ.
ಕೂಡಲೇ ಆತನಿಗೆ ಮಾದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿ ರವಾನಿಸುವ ಸಂದರ್ಭ ದಾರಿ ಮದ್ಯೆ ಅಸುನೀಗಿರುವುದಾಗಿ ತಿಳಿದುಬಂದಿದೆ.


ಆದರೆ ಅಪ್ಪಿ ಯಾವ ರೀತಿ ಜಲ ಸಮಾಧಿ ಆದ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.