ಸುಳ್ಯ | ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುತ್ತಿದ್ದ ಅಂಬ್ಯುಲೆನ್ಸ್ ಪಲ್ಟಿ | ಮೂವರು ಮತ್ತೆ ಆಸ್ಪತ್ರೆಗೆ

ಸಾಯಬೇಕೆಂದು ವಿಷ ಸೇವಿಸಿದ್ದ ವ್ಯಕ್ತಿಯನ್ನು ಬದುಕಿಸಲು ಆಸ್ಪತ್ರೆ ಸೇರಿದ್ದ ಮನೆಯವರು ಆ ವ್ಯಕ್ತಿ ಗುಣಮುಖರಾಗಿ ಡಿಸ್ಚಾರ್ಜ್ ಗೊಂಡು ಅಂಬ್ಯುಲೆನ್ಸ್ನಲ್ಲಿ ಊರಿಗೆ ವಾಪಸ್ಸಾಗುತ್ತಿದ್ದಾಗ ಮತ್ತೊಂದು ದುರ್ವಿಧಿ ಎದುರಾದ ಘಟನೆ ಸುಳ್ಯದಲ್ಲಿ ನಡೆದಿದೆ.

ಕೊಡಗು ಶನಿವಾರಸಂತೆಯ ಸುರೇಶ್ ಎಂಬ ವ್ಯಕ್ತಿ ನಾಲ್ಕು ದಿನದ ಹಿಂದೆ ವಿಷ ಸೇವಿಸಿದ್ದು, ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕಾರಣದಿಂದ ಗುಣಮುಖರಾಗಿದ್ದ ಅವರನ್ನು ಇಂದು ಸಂಜೆ ಡಿಸ್ಚಾರ್ಜ್ ಮಾಡಿ, ಅಂಬುಲೆನ್ಸ್ ಒಂದರಲ್ಲಿ ಸುರೇಶ್ ರವರ ಮಗ ಗೌತಮ್ ಬಾಡಿಗೆಗೆ ಗೊತ್ತುಪಡಿಸಿಕೊಂಡು ಮಡಿಕೇರಿಗೆ ಹೊರಟಿದ್ರು.

ಇಂದು ಚಿಕ್ಕಪ್ಪನ ಮನೆಗೆ ಹೋಗಿ ನಾಳೆ ಮಡಿಕೇರಿಯ ಶನಿವಾರ ಸಂತೆಗೆ ಹೋಗುವುದೆಂದು ನಿರ್ಧರಿಸಿದರು.

ಅಂಬುಲೆನ್ಸ್ ಮಂಗಳೂರಿನಿಂದ ಹೊರಟು ಬರುತ್ತಿದ್ದಾಗ ಸುಳ್ಯ ಹಳೆಗೇಟು ಬಳಿಯ ತಿರುವು ಬಳಿ ತಲುಪಿದಾಗ ಮಳೆಯ ಕಾರಣದಿಂದ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಜಾರಿ ರಸ್ತೆ ಬದಿಗೆ ಗುದ್ದಿ ಪಲ್ಟಿ ಹೊಡೆಯಿತು.

ಪರಿಣಾಮವಾಗಿ ಚಾಲಕ ಕಾರ್ತಿಕ್,ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸುರೇಶ್, ಅವರ ಮಗ ಗೌತಮ್ ಮೂವರು ಗಾಯಗೊಂಡರು.

ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಆಂಬುಲೆನ್ಸ್ ನುಜ್ಜುಗುಜ್ಜಾಗಿದೆ.

Leave A Reply

Your email address will not be published.