ಬಳ್ಪ ಗ್ರಾಮದಲ್ಲಿ ಮದ್ಯಾಹ್ನ 2 ರವರಗೆ ಮಾತ್ರ ವ್ಯಾಪಾರ ನಡೆಸಲು ನಿರ್ಧಾರ

Share the Article

ವರದಿ : ಉದಿತ್ ಕುಮಾರ್ ಬೀನಡ್ಕ

ಸುಳ್ಯ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೇ. 3ರ ವರಗಿನ ಲಾಕ್ಡೌನ್ ನಿಯಮದಂತೆ ಬೆಳಿಗ್ಗೆ 7 ರಿಂದ ಮದ್ಯಾಹ್ನ 2ರವರೆಗೆ ಮಾತ್ರ ವ್ಯಾಪಾರ ನಡೆಸುವುದಾಗಿ ಗ್ರಾಮದ ವರ್ತಕರ ಸಂಘವು ತೀರ್ಮಾನಿಸಿದೆ.

ಗ್ರಾಮದ ಜನರು ಆದಷ್ಟು ಮನೆಯಲ್ಲಿಯೇ ಇರಬೇಕು ಅದೇರೀತಿ ಅಂಗಡಿಗಳಲ್ಲಿ ಜನಸಂಖ್ಯೆ ನಿಯಂತ್ರಿಸುವ ಸಲುವಾಗಿ ವರ್ತಕರು ಸ್ವಯಂಪ್ರೇರಿತವಾಗಿ ಇದನ್ನು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

ಒಟ್ಟಿನಲ್ಲಿ ‘ನಮ್ಮ ರಕ್ಷಣೆ ನಮ್ಮ ಜವಾಬ್ದಾರಿ’ ಎಂಬುದನ್ನು ಮನಗಂಡು ಹಾಗೆಯೇ ಗ್ರಾಮದ ಜನರ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಅಲ್ಲಿನ ವ್ಯಾಪಾರಸ್ಥರು ತಿಳಿಸಿದ್ದಾರೆ.

Leave A Reply