ಅಡ್ಕಾರು ಪಯಸ್ವಿನಿ ನದಿಯಲ್ಲಿ ತೆಪ್ಪ ಮಗುಚಿ ಯುವಕ ನೀರು ಪಾಲು

ನದಿಗೆ ಹೋದ ಇಬ್ಬರು ಯುವಕರ ಪೈಕಿ ಓರ್ವ ನೀರು ಪಾಲಾದ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನ ಸಮೀಪದಲ್ಲಿ ಹರಿಯುತ್ತಿರುವ ಪಯಸ್ವಿನಿ ನದಿಯಲ್ಲಿ ನಡೆದಿದೆ.

ನೀರು ಪಾಲಾದ ಯುವಕ ಕನಕಮಜಲಿನ ಹರೀಶ್ ಮಳಿ ಅವರ ಪುತ್ರ ಅಶ್ವಿತ್ ಎಂದು ತಿಳಿದುಬಂದಿದೆ.

ಕನಕ ಮಜಲಿನ ಅಶ್ವಿತ್ ಹಾಗೂ ಅಡ್ಕಾರಿನ ಪ್ರಸನ್ನ ಎಂಬ ಯುವಕರು ಪಯಸ್ವಿನಿ ನದಿಗೆ ತೆರಳಿದ್ದರು. ಆರಂಭದಲ್ಲಿ ಇಬ್ಬರೂ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಒಬ್ಬರೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಆಯತಪ್ಪಿದ ಪರಿಣಾಮ ಮಗುಚಿ ನೀರು ಪಾಲಾದರೆಂದು ತಿಳಿದುಬಂದಿದೆ.

ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಬೀಡುಬಿಟ್ಟಿದ್ದು, ಸ್ಥಳೀಯರ ನೆರವಿನೊಂದಿಗೆ ಸ್ವಲ್ಪ ಹೊತ್ತು ಕಾರ್ಯಾಚರಣೆ ನಡೆಸಿದರು. ಬೆಳಕಿನ ಕೊರತೆಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ನಾಳೆ ಮುಂಜಾನೆ ಮತ್ತೆ ಆರಂಭಗೊಳ್ಳಲಿದೆ.

Leave A Reply

Your email address will not be published.