ಸುಳ್ಯ |ಅಜ್ಜಾವರ ಆಟು ತಂಙಳ್ ಉಪ್ಪಾಪ ಸ್ವಲಾತ್ ಮಜ್ಲಿಸ್ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರ

ಆದೂರು ಆಟು ತಂಙಳ್ ಎಂದೇ ಖ್ಯಾತಿ ಹೊಂದಿದ ಸೈಯದ್ ರವರ ಹೆಸರಿನಲ್ಲಿ ಅಜ್ಜಾವರ ಪೇರಾಲು ಸಂಕೇಶ್ ಎಂಬಲ್ಲಿ ಅಬ್ದುಲ್ ಕುಂಞಿ ಸಂಕೇಶ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಲಾತ್ ಮಜ್ಲಿಸ್ ಕಟ್ಟಡದಲ್ಲಿ ಸಂಸ್ಥೆಗೆ ಬರುವ ಮತ್ತು ಸ್ಥಳೀಯ ಪರಿಸರದ ಜನರು ಸೇರಿ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಮೇ 9ರಂದು ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಅಬ್ದುಲ್ಲಾ ಕುಂಞಿ ಸಂಕೇಶ್ ಕಳೆದ ಎರಡು ವರ್ಷಗಳಿಂದ ಈ ಒಂದು ಪರಿಸರದಲ್ಲಿ ಆದೂರು ಆಟು ತಂಙಳ್ ರವರ ಹೆಸರಿನಲ್ಲಿ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ನಡೆಯುತ್ತಿದ್ದು ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಹಲವಾರು ರೋಗಿಗಳು ಇಲ್ಲಿಗೆ ಬಂದು ತಂಙಳ್ ರವರ ಹೆಸರಿನಲ್ಲಿ ಕೊಡುವ ನೀರು ಮತ್ತು ಕೊಬ್ಬರಿ ಎಣ್ಣೆಯ ವಿಸ್ಮಯದಿಂದ ಹಲವಾರು ರೋಗಗಳಿಗೆ ಶಮನ ದೊರೆತಿರುವ ನಿರ್ದಶನಗಳು ನಡೆಯುತ್ತಿದೆ. ಮಾರಕ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ, ಬಂಜೆತನ ನಿವಾರಣೆ, ಹಾಗೂ ಇನ್ನು ಮುಂತಾದ ಕಾಯಿಲೆಗಳಿಂದ ಗುಣಮುಖರಾಗಿರುತ್ತಾರೆ. ತಂಙಳ್ ರವರು ಜೀವನದುದ್ದಕ್ಕೂ ದಾನ ಧರ್ಮಗಳನ್ನು ತೊಡಗಿಸಿಕೊಂಡಿದ್ದರು. ಬಡವರ ಆಶಾ ಕಿರಣವಾಗಿದ್ದರು.
ಇತ್ತೀಚಿನ ಕೆಲವು ದಿನಗಳಿಂದ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸಕಾರ್ಯಗಳು ಇಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಅದೇ ರೀತಿ ಪವಿತ್ರ ರಂಜಾನ್ ತಿಂಗಳ ಆಗಮನದೊಂದಿಗೆ ಇರುವುದರಿಂದ ನಮ್ಮ ಪೇರಾಲು ಪರಿಸರ ಮತ್ತು ನಮ್ಮ ಸಂಸ್ಥೆಗೆ ನಿರಂತರವಾಗಿ ಬರುತ್ತಿರುವವರನ್ನು ಗುರುತಿಸಿ ಜಾತಿ ಧರ್ಮದ ಭೇದಭಾವವಿಲ್ಲದೆ ಒಂದು ಆಹಾರ ಸಾಮಗ್ರಿಗಳ ಕಿಟ್ ನೀಡುತ್ತಿದ್ದೇವೆ ಹಾಗೂ ಈ ಒಂದು ದಾನವು ಅಲ್ಲಾಹನ ಹಾಗೂ ತಂಙಳ್ ರವರ ತೃಪ್ತಿಗಾಗಿ ನೀಡುತ್ತಿದ್ದೇವೆ. ಇದರಿಂದ ಅವರ ಕರುಣೆಯು ಸದಾ ನಮ್ಮಲ್ಲಿ ಇರಲಿ ಎಂಬ ಉದ್ದೇಶದಿಂದ ಒಂದು ಪುಣ್ಯ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ ಅಬ್ದುಲ್ಲಾ ಹಾಜಿ ಜಯನಗರ, ಬಶೀರ್ ಸಕಾಫಿ, ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.