ಡಾ.ಸುರೇಶ್ ಪುತ್ತೂರಾಯ ಅವರಿಗೆ ಬೆದರಿಕೆ ಕರೆ ಆರೋಪ | ಸಾಮಾಜಿಕ ಜಾಲತಾಣ ಸಂದೇಶವನ್ನು ತಿರುಚಿ ರವಾನೆ | ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ

ಪುತ್ತೂರು: ವಾಟ್ಸಪ್ ನಲ್ಲಿ ಕಳುಹಿಸಿದ್ದೇನೆ ಎನ್ನಲಾಗುತ್ತಿರುವ ಸಂದೇಶವನ್ನು, ತಿರುಚಿ ಕೋಮು ಪ್ರಚೋದನೆ ಆಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಲಾಗಿದೆ ಹಾಗೂ ವೈದ್ಯರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಿ ಪುತ್ತೂರಿನ ಖ್ಯಾತ ವೈದ್ಯರಾಗಿರುವ ಡಾ.ಸುರೇಶ್ ಪುತ್ತೂರಾಯರು ನೀಡಿದ ದೂರನ್ನು ಸ್ವೀಕರಿಸಿದ ಪುತ್ತೂರಿನ ನ್ಯಾಯಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪುತ್ತೂರು ನಗರ ಪೋಲೀಸ್ ಠಾಣೆಗೆ ಆದೇಶಿಸಿದೆ.

ಮಾ.20 ರಂದು ವೈದ್ಯರು ಕರ್ತವ್ಯ ನಿರ್ವಹಿಸುವ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ರವಿಪ್ರಸಾದ್ ಶೆಟ್ಟಿ ಎನ್ನುವವರು ವೈದ್ಯರು ಪಾರ್ವಡ್ ಮಾಡಿದ್ದ ಸಂದೇಶವೊಂದನ್ನು ತಿರುಚಿ ಕೋಮು ಪ್ರಚೋದನೆಯಾಗುವಂತೆ ಸಂದೇಶ ಹರಿಯಬಿಟ್ಟಿದ್ದು ವೈದ್ಯ ಡಾ. ಸುರೇಶ್ ಪುತ್ತೂರಾಯರಿಗೆ ತಿಳಿದು ಬಂದಿರುತ್ತದೆ.


ಆ ನಂತರ ವಾಟ್ಸಪ್, ಮೊಬೈಲ್ ಗೆ ದೇಶ ವಿದೇಶಗಳಿಂದ ಹಲವು ಪೋನ್ ಕರೆಗಳ ಮೂಲಕ ವೈದ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅರೋಪಿಸಿ ವೈದ್ಯರು ವಕೀಲ ಮಹೇಶ್ ಕಜೆ ಮೂಲಕ ಕೋರ್ಟ್ ಗೆ ದೂರು ದಾಖಲಿಸಿದ್ದರು.

ಇಂದು ಪುತ್ತೂರಿನ ನ್ಯಾಯಾಲಯ ವೈದ್ಯರ ವಿರುದ್ದ ಸಂದೇಶ ರವಾನಿಸಿದ ರವಿಪ್ರಸಾದ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪುತ್ತೂರು ನಗರ ಪೋಲೀಸ್ ಠಾಣೆಗೆ ಆದೇಶಿಸಿದೆ.

Leave A Reply

Your email address will not be published.