ದಕ್ಷಿಣ ಕನ್ನಡದಲ್ಲಿ ಇಂದು ಮತ್ತೆ ಮೂರು ಪಾಸಿಟಿವ್ | ಕೊರೋನಾದ ಕಾರ್ಮೋಡ ಮತ್ತಷ್ಟು ಗಾಢ
ಮತ್ತೆ ಬೆಚ್ಚಿಬಿದ್ದಿದೆ ದಕ್ಷಿಣ ಕನ್ನಡ. ಬಂಟ್ವಾಳದ ಭೂತ ಅಕ್ಷರಶ: ಬೆನ್ನು ಹತ್ತಿದೆ.
ಇವತ್ತು ಶನಿವಾರ ಒಂದೇ ಕುಟುಂಬದ ಮೂವರಿಗೇ ಕೋರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಆ ಮೂಲಕ ಮಂಗಳೂರು ಮತ್ತೆರೆಡ್ ರೆಡ್ ಝೋನ್ ಗೆ ಶಿಫ್ಟ್ ಆಗಲಿದೆ.
30 ವರ್ಷದ ಪುರುಷ, 60 ವರ್ಷದ ಮಹಿಳೆ ಮತ್ತು 78 ವರ್ಷದ ಮಹಿಳೆ ಆಗಿದ್ದು, ಎಲ್ಲರೂ ಬಂಟ್ವಾಳದವರು. ಮೇ.1ರಂದು ಕೊರೋನ ಪತ್ತೆಯಾಗಿದ್ದ 69 ವರ್ಷದ P-578 ವೃದ್ದನಿಂದ ತಗುಲಿದ ಸೋಂಕು ವೃದ್ದನ ಕುಟುಂಬದ ಮೂರು ಜನರಲ್ಲಿ ಸೋಂಕು ಪತ್ತೆಯಾಗಿದೆ.
ಮಂಗಳೂರಿನ ಇಬ್ಬರು ಮಹಿಳೆಯರು ಮತ್ತು ಓರ್ವ ವೃದ್ಧನಿಗೆ ಕೋರೋನಾ ಇರುವ ಇರುವ ಸುದ್ದಿ ಬರುತ್ತಿದ್ದಂತೆ ಮತ್ತಷ್ಟು ಕೋರೋನ ಆತಂಕದ ಕಾರ್ಮೋಡ ದಕ್ಷಿಣ ಕನ್ನಡವನ್ನು ಆವರಿಸಿದೆ.
ಮೇ ಒಂದರಂದು ಒಂದು ಪ್ರಕರಣ ಐದರಂದು 3 ಪ್ರಕರಣ ದಾಖಲಾಗಿತ್ತು. ಇದೀಗ ಮೇ ಒಂಬತ್ತರಂದು ಮತ್ತೆ 3 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಹೆಚ್ಚಾಗಿದೆ.
ಇಲ್ಲಿಯವರೆಗೆ ದಕ್ಷಿಣ ಕನ್ನಡದಲ್ಲಿ ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ.