ಮೋದಿ ಮಾದರಿಯಲ್ಲಿ ಶಾಸಕ ಹರೀಶ್ ಪೂಂಜ ಅವರಿಂದ ಸಾಮಾನ್ಯ ಕಾರ್ಯಕರ್ತರಿಗೆ ಕರೆ | ” ದೇಶಕ್ಕೆ ಮೋದಿ ಬೆಳ್ತಂಗಡಿಗೆ ಪೂಂಜಾ ” ಕಾರ್ಯಕರ್ತರ ಉದ್ಘೋಷ !

” ಹಲೋ ಯಾನ್ ಹರೀಶ್ ಪೂಂಜಾ ಪಾತೆರೊಂದುಲ್ಲೆ. ಇಲ್ಲಲ್ ಮಾತೆರ್ಲಾ ಸೌಖ್ಯಾನಾ ” ಅತ್ತ ಕಡೆಯಿಂದ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಮಾತಾಡುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರಿಗೆ ಒಂದು ಕ್ಷಣ ದಿಗ್ಭ್ರಮೆ. ಯಾರೋ ತಮ್ಮನ್ನು ಕಿಚಾಯಿಸಲು ಫೋನ್ ಮಾಡುತ್ತಿದ್ದಾರೆ ಎಂಬ ಅಪನಂಬಿಕೆ.

ಆದರೆ ಇವತ್ತು ಶ್ರೀ ಹರೀಶ್ ಪೂಂಜಾ ಅವರು ಖುದ್ದು ಫೋನ್ ಎತ್ತಿಕೊಂಡು ಮತ್ತೊಂದು ವಿನೂತನ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ. ತಾವು ಬೆಂಗಳೂರಿನಿಂದ ತಮ್ಮ ಕಾರ್ಯ ಮುಗಿಸಿಕೊಂಡು ದಾರಿಯುದ್ದಕ್ಕೂ ಬರುವ ಪ್ರಯಾಣದ ಸಮಯದಲ್ಲಿ ಕಾಲವನ್ನು ವ್ಯರ್ಥಮಾಡಿಕೊಳ್ಳದೆ ಸಹೃದಯ ಕಾರ್ಯಕರ್ತರ ಸುಖ ದುಃಖ ದುಮ್ಮಾನಗಳನ್ನು ಆಲಿಸುವ ಪ್ರಯತ್ನ ಮಾಡಿದ್ದಾರೆ.

ಅವರು ಬೆಂಗಳೂರಿನಿಂದ ಬರುತ್ತಿರುವಾಗ ನಿಷ್ಠಾವಂತ ಕಾರ್ಯಕರ್ತರಿಗೆ ಹಿರಿಯ ಕಿರಿಯರೆನ್ನದೆ ಫೋನಾಯಿಸಿ ಅವರು ಇಷ್ಟು ದಿನ ಸಾಮಾಜಿಕವಾಗಿ ಜನಸೇವೆಯಲ್ಲಿ ತೊಡಗಿದ್ದನ್ನು ಸ್ಮರಿಸಿದ್ದಾರೆ.

ಅಲ್ಲದೇ, ಕಾರ್ಯಕರ್ತರು ತಮ್ಮ ಎಂದಿನ ಸೇವಾ ಕಾರ್ಯಕ್ರಮದಲ್ಲಿ ಏನಾದರೂ ಸಮಸ್ಯೆ ತೊಂದರೆ ಕಂಡುಬಂದರೆ ಅದನ್ನು ಪರಿಹರಿಸುವುದಾಗಿ ಹೇಳಿದ್ದಾರೆ. ಈ ಲಾಕ್ ಡೌನ್ ನ ಸಮಯದಲ್ಲಿ ತಮಗೆ ಏನಾದರೂ ಸಹಾಯ ಬೇಕಿದ್ದಲ್ಲಿ ಅವರನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ. ತಾಲೂಕಿನ ವಿವಿಧ ಕಡೆ ಮತ್ತು ತಾಲೂಕಿನಿಂದ ಹೊರಗೆ ಇರುವ ಹಲವು ಊರುಗಳಿಗೆ ಹರೀಶ್ ಪೂಂಜಾ ಅವರು ಕರೆಮಾಡಿ ವಿಚಾರಿಸಿದ್ದಾರೆ. ಬೆಳ್ತಂಗಡಿಯ, ಸದ್ಯಕ್ಕೆ ದುಬೈಯಲ್ಲಿರುವ ಕೆಲವರಿಗೆ ಅವರು ಕರೆ ಮಾಡಿ ಶುಭಾಶಯ ಕೋರಿದ್ದಾರೆ.

ಶಾಸಕರ ನಡೆಗೆ ಪ್ರಶಂಸೆಯ ಸುರಿಮಳೆಯಾಗಿದೆ.
ಶ್ರೀ ಹರೀಶ್ ಪೂಂಜಾ ರವರ ಈ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು ಕಾರ್ಯಕರ್ತರುಗಳು ಇನ್ನಷ್ಟು ಹುಮ್ಮಸ್ಸಿನಿಂದ, ಒಮ್ಮನಸ್ಸಿನಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ.

ಈ ಬಗ್ಗೆ ಖುಷಿ ತೋಡಿಕೊಂಡ ಕೆಲವು ಕಾರ್ಯಕರ್ತರ ನುಡಿ ಹೀಗಿದೆ ನೋಡಿ.

ಕೋರೋನಾ ಸಮಯದ ಬಿಡುವಿನ ವೇಳೆಯಲ್ಲಿ ಕಾರ್ಯಕರ್ತರ ಮೇಲೆ ಪ್ರೀತಿ ಇಟ್ಟು ಕರೆ ಮಾಡಿ ಯೋಗಕ್ಷೇಮ ವಿಚಾರಿಸುವ ದೊಡ್ಡ ಮನಸಿನ ನಮ್ಮ ಪ್ರೀತಿಯ ಶಾಸಕ ಹರೀಶ್ ಪೂಂಜ……ನಿಮ್ಮ ಜೊತೆ ನಾವೀದ್ದೇವೆ..ನಮ್ಮ ಜೊತೆ ನೀವಿದ್ದೇವೆ ಅನ್ನುವ ಭರವಸೆ ದುಪ್ಪಟ್ಟಾಗುತ್ತಿದೆ…ಎಂದೂ ನಿಮ್ಮನ್ನು ಕೈ ಬಿಡಲ್ಲ….

ಅದೆಷ್ಟೊ ಹಿರಿಯ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುವಂತೆ, ನಮ್ಮೂರ ಜನಮೆಚ್ಚಿದ ಶಾಸಕ ಹರೀಶ್ ಪೂಂಜ ತಾಲ್ಲೂಕಿನ ಹಿರಿಯ ಕಿರಿಯ ಕಾರ್ಯಕರ್ತರೆನ್ನದೇ ಕರೆಗಳನ್ನು ಮಾಡಿ ಯೋಗಕ್ಷೇಮ ವಿಚಾರಿಸಿರೋದು ನಮ್ಮ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ.

ಒಬ್ಬರ ಒಂದು ಸಣ್ಣ ನಡೆ ನಮ್ಮಲ್ಲಿ ಎಷ್ಟು ದೊಡ್ಡ ಮಟ್ಟಿನ ಸಂಚಲನ ಮೂಡಿಸುತ್ತದೆ ಎಂಬುದಕ್ಕೆ ನಮ್ಮ ಶಾಸಕರ ಇವತ್ತಿನ ಒಂದು ನಡೆ ಸಾಕ್ಷಿಯಾಗಿದೆ.
ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ, ಸಾಧ್ಯವಾಗಿಸಿದವರು ಜನಮನದಲ್ಲಿ ಶಾಶ್ವತವಾಗಿ ಇರುತ್ತಾರೆ.

ಮೋದಿ ಮೊನ್ನೆ ಹಿರಿಯ ಕಾರ್ಯಕರ್ತರಿಗೆ ಕರೆ ಮಾಡಿದಾಗ ಅವರಲ್ಲಾದ ಸಂತೋಷದಷ್ಟೇ ಇಂದು ನಮ್ಮಲ್ಲಾಗಿದೆ. ಧನ್ಯೋಸ್ಮಿ❤️

ಇಂದು ಮಧ್ಯಾಹ್ನ ಊಟ ಮಾಡಿದಷ್ಟು ಖುಶಿಯಾಗಿದೆ ನಮಗೆಲ್ಲ….??? ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕನ ಬಗ್ಗೆ ಹೆಮ್ಮೆ ಅನಿಸುತ್ತೇ…..ನನಗಂತೂ ಹೊಟ್ಟೆ ಫುಲ್ಲಾಯಿತು?

ದೇಶಕ್ಕೆ ಮೋದಿ. ತಾಲ್ಲೂಕಿಗೆ ಹರೀಶ್ ಪೂಂಜ ಎಂಬ ಉದ್ಘೋಷ ತಾಲೂಕಿನೆಲ್ಲೆಡೆ ಹರಿದಾಡುತ್ತಿದೆ. ಕೀಪ್ ಇಟ್ ಅಫ್ ಮಿಸ್ಟರ್ ಪೂಂಜಾ !

Leave A Reply

Your email address will not be published.