ಸುಳ್ಯ| ಚಂದನ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯಮಟ್ಟದ ಚಿತ್ರ ವಿಮರ್ಶಾ ಸ್ಪರ್ಧೆ

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ನಡೆಸಲಾದ ಕೋಡಿಹಾಳದ ಚಿತ್ತಾರದ ಕೌದಿ ಚಲನ ಚಿತ್ರದ ಸಾಮಾಜಿಕ ಜಾಲತಾಣವಾದ , ವಾಟ್ಸಪ್ ನಲ್ಲಿ ರಾಜ್ಯಮಟ್ಟದ ಸಿನೆಮಾ ನೋಡಿ ವಿಮರ್ಶೆ ಬರೆ ವಿಮರ್ಶಾ ಸ್ಪರ್ಧೆ ನಡೆಸಲಾಯಿತು . ಸುಳ್ಯದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ಸುಳ್ಯರವರು ಚಂದನ ಸಾಹಿತ್ಯ ವೇದಿಕೆ ಮೂಲಕ ನಡೆಸಲಾದ ರಾಜ್ಯಮಟ್ಟದ ಚಿತ್ರ ವಿಮರ್ಶಾ ಸ್ಪರ್ಧೆಯಲ್ಲಿ ಒಟ್ಟು 25 ಜನ ಭಾಗವಹಿಸಿದ್ದರು .

ಸಿನೆಮಾ ನೋಡಿ ವಿಮರ್ಶೆ ಬರೆ ಈ ಸ್ಪರ್ಧೆಗೆ ಚಿತ್ರದ ಲಿಂಕನ್ನು ಹಲವು ಸಾಮಾಜಿಕ ಜಾಲತಾಣದಲ್ಲಿ ನೀಡಿ ವಿಮರ್ಶೆಗಳನ್ನು ಆಹ್ವಾನಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ವಿಜೇತರಾದವರ ಫಲಿತಾಂಶ ಪಟ್ಟಿ ಹೀಗಿದೆ ಪ್ರಥಮ ಬಹುಮಾನ ವಿಶ್ವನಾಥ್ ಎನ್ ನೇರಳಕಟ್ಟೆ ಪುತ್ತೂರು , ಆನಂದ್ ಹಕ್ಕೆನ್ನವರ್ ಬೆಳಗಾವಿ , ದ್ವಿತೀಯ ಬಹುಮಾನ ಡಾ.ಗುರುಸಿದ್ದಯ್ಯ ಸ್ವಾಮಿ ಅಕ್ಕಲಕೋಟ , ಎಮ್ ಎಸ್ ಉಷಾ ಪ್ರಕಾಶ್ , ಮೈಸೂರು , ತೃತೀಯ ಬಹುಮಾನ ಈರಯ್ಯ ಸಂಬನ್ನಿಗೋಳಮಠ ,ಹರಿನರಸಿಂಹ ಉಪಾಧ್ಯಾಯ,
ಶಿವಕುಮಾರ್ ಮುಂಡಾಸದ್ ಕೋಡಿಹಾಳ, ಬಾಗಲಕೋಟೆ, ಸಮಾಧಾನಕರ ಬಹುಮಾನ ವರ್ಷಿಣಿ ಆರ್ ಮೈಸೂರು, ಕೊಂಡಪ್ಪ ಭಟ್ಟರ್ ಮೈಸೂರು,
ಹಕ್ಕಿ ಬಜಪೆ ದ ಕ ದಾಮೋದರ್ ಬಡಿಗೇರ್ , ಬೆಳಗಾವಿ , ಮೆಚ್ಚುಗೆ ಗಳಿಸಿದವರು ಪ್ರೀತಿ ಭರತ್ ಬೆಂಗಳೂರು ,ಎಸ್ ಬಿ ಹೂಲಿ ಸುಳ್ಯ , ಸಾನು ಉಬರಡ್ಕ ಸುಳ್ಯ , ಜ್ಯೋತಿ ಬಾಳಿಗಾ.
ಬಹುಮಾನಿತರಿಗೆ ಪ್ರಶಸ್ತಿ ಪತ್ರ , ಪುಸ್ತಕ ಬಹುಮಾನ ಹಾಗೂ ಚಲನಚಿತ್ರದ ಡಿವಿಡಿ ನೀಡಲಾಗುವದು. ಸಮಾಧಾನಕರ ಮತ್ತು ಮೆಚ್ಚುಗೆ ಪಡೆದವರಿಗೆ ಪ್ರಶಸ್ತಿಪತ್ರ ನೀಡಲಾಗುವದು ಎಂದು ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ತಿಳಿಸಿದ್ದಾರೆ.

Leave A Reply

Your email address will not be published.