ಸೇವಾ ಭಾರತಿ ಸವಣೂರು ತಂಡದಿಂದ 700ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

ಸವಣೂರು :  ಇಡೀ ವಿಶ್ವಕ್ಕೆ ಕರೋನಾ ಎಂಬಮಹಾಮರಿಯಿಂದ ತೊಂದರೆಯನ್ನು ಅನುಭವಿಸುತ್ತಿರುವಾಗಇದನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಪ್ರಧಾನಿಗಳುದೇಶದಲ್ಲಿ ಮೊದಲಿಗೆ ೨೧ ದಿನಗಳ ಲಾಕ್ ಡೌನ್ ಹೇರಿದಬಳಿಕ, ಈ ಮಹಾಮಾರಿಯ ಬೀಕರತೆಯ ಪರಿಣಾಮಮುಂದೆನ ೧೯ ದಿನಗಳ ಕಾಲ ಲಾಕಡೌನ ಆದೇಶವನ್ನುಮುಂದುವರಿಸಿದರು.

ಈ ಸಂದರ್ಭದಲ್ಲಿ ದಿನನಿತ್ಯದಲ್ಲಿ ಕೂಲಿ ಮಾಡಿ ಬದುಕುವಬಹಳಷ್ಟು ಕುಟುಂಬಗಳು ಒಂದು ಹೊತ್ತಿನ ತುತ್ತಿಗೂ ಕಷ್ಟಪಡುತ್ತಿರುವ ಸಂದರ್ಭದಲ್ಲಿ ತಮ್ಮೆಲ್ಲಾ ಕೆಲಸದ ನಡುವೆತನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಥಿಕವಾಗಿಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅತೀ ಅವಶ್ಯಕವಾದಅಕ್ಕಿ, ದಿನಸಿ ಸಾಮಾನುಗಳು ಹಾಗೂ ಊರಿನಲ್ಲಿರುವವೃದ್ಧರಿಗೆ ಬೇಕಾದ ಔಷಧಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಕ್ಷೇವಿಲ್ಲದೇ ಸವಣೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸೇವಾ ಭಾರತೀ ಎಂಬಸಂಘಟನೆಯ ಮೂಲಕ ಸವಣೂರು, ಪಾಲ್ತಾಡಿ ಹಾಗೂಪುಣ್ಚಪ್ಪಾಡಿ ಗ್ರಾಮದಲ್ಲಿ ಒಟ್ಟು 700 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸಲಾಗಿದೆ.

ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ  ರಾಕೇಶ್ ರೈ ಕೆಡೆಂಜಿ,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥಕಾಯರ್ಗ ಅವರು ಈ ತಂಡದ ಪ್ರಮುಖಕಾರ್ಯಕರ್ತರಾಗಿ ಮನೆಮನೆಗೂ ಆಹಾರ ಸಾಮಾಗ್ರಿತಲುಪಿಸುವ ನಿಟ್ಟಿನಲ್ಲಿ  ಪ್ರಮುಖ ಪಾತ್ರ ವಹಿಸಿದ್ದಾರೆ.

 ಜನಪ್ರತಿನಿಽಗಳು,ದಾನಿಗಳು, ಸಂಘ ಸಂಸ್ಥೆಗಳ ಮೂಲಕಸಂಗ್ರಹಿಸಿದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ಆರ್ಥಿಕವಾಗಿಬಡತನದಲ್ಲಿರುವ ಕುಟುಂಬದ ಪಟ್ಟಿಯನ್ನು ಸ್ಥಳೀಯರಮೂಲಕ ಪಡೆದು ದಿನಸಿಗಳನ್ನು  ಸಂಗ್ರಹಿಸಿ ಕಿಟ್ ಗಳನ್ನುತಯಾರಿಸಿ ಇದನ್ನು ಮುತುವರ್ಜಿಯಿಂದ ತಲುಪಿಸುವಕಾರ್ಯ ಸೇವಾ ಭಾರತಿ ಮೂಲಕ  ಈ ತಂಡಮಾಡುತ್ತಿದೆ.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಉಪಾಧ್ಯಕ್ಷ ತಾರಾನಾಥ ಕಾಯರ್ಗ ಅವರ ಮನೆಯಲ್ಲಿ ಆಹಾರ ಸಾಮಾಗ್ರಿಗಳನ್ನು  ಸ್ವಯಂ ಸೇವಕರಸಹಕಾರದೊಂದಿಗೆ ಜೋಡಿಸಿಕೊಂಡು  ಕಿಟ್ತಯಾರಿಸಿಕೊಂಡು ಅಶಕ್ತರಿಗೆ ನೆರಗುವ ಕಾರ್ಯಮಾಡಲಾಗಿದೆ.

ಮೇ. 8ರವರೆಗೆ ಸೇವಾಭಾರತಿ ಸವಣೂರು ಗ್ರಾ.ಪಂಚಾಯತ್ ವ್ಯಾಪ್ತಿ ಇದರ ವತಿಯಿಂದ ಪಂಚಾಯತ್ವ್ಯಾಪ್ತಿಯ 3 ಗ್ರಾಮಗಳಾದ  ಪಾಲ್ತಾಡಿಯಲ್ಲಿ  284,ಪುಣ್ಚಪ್ಪಾಡಿ ಗ್ರಾಮದಲ್ಲಿ 173, ಸವಣೂರು ಗ್ರಾಮದಲ್ಲಿ 235  ಹೀಗೆ  ಒಟ್ಟು 697 ಕುಟಂಬಗಳಿಗೆ ಹಾಗೂಹತ್ತಿರದ ಗ್ರಾಮಗಳಾದ ಚಾರ್ವಾಕ-5,ದೋಳ್ಪಾಡಿ-6,ಕಾಯಿಮಣ-4, ಕುದ್ಮಾರು-10 ಕುಟುಂಬಗಳಿಗೆ  ಸೇರಿ 717 ಮನೆಗಳಿಗೆ ಆಹಾರಸಾಮಾಗ್ರಿಗಳನ್ನು ವಿತರಿಸಲಾಗಿದೆ.

Leave A Reply

Your email address will not be published.