ಅಸಂಘಟಿತ ಕಟ್ಟಡ ಕಾರ್ಮಿಕರು, ರಿಕ್ಷಾ, ಸವಿತಾ ಸಮಾಜ… ರಾಜ್ಯದ ಪ್ಯಾಕೇಜ್, ಮದ್ಯ ದುಬಾರಿ !
ರಾಜ್ಯ ಸರ್ಕಾರದಿಂದ ಒಟ್ಟು 1610 ಕೋಟಿ ಪ್ಯಾಕೇಜ್ ಬಿಡುಗಡೆ
7.5 ಲಕ್ಷ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿಯ ಪರಿಹಾರವಾಗಿ ತಲಾ 5000 ರೂಪಾಯಿ
2.3 ಲಕ್ಷ ಜನ ಕಟ್ಟಿಂಗ್ ಮಾಡುವ ಸವಿತಾ ಸಮಾಜದವರಿಗೆ ತಲಾ 5000 ರೂಪಾಯಿ
ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಒಟ್ಟು ಐದು ಸಾವಿರ ರೂಪಾಯಿ ಸಹಾಯಧನ. ಕೆಲವರಿಗೆ ಈಗಾಗಲೇ 2000 ರೂಪಾಯಿ ಎಷ್ಟನ್ನು ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಉಳಿದ ಮೂರು ಸಾವಿರವನ್ನು ಶೀಘ್ರ ಪಾವತಿ ಮಾಡಲಾಗುತ್ತದೆ. ಆ ಮೂಲಕ ಕಟ್ಟಡ ಕಾರ್ಮಿಕರು ಬೇರೆ ರಾಜ್ಯಗಳಿಗೆ ವಲಸೆ ಹೋಗದಂತೆ ತಡೆಯುವ ಪ್ರಯತ್ನ ಇದಾಗಿದೆ.
60000 ಜನ ಅಗಸರಿಗೆ ತಲಾ 5000 ನೀಡಿಕೆ
ಹೂವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್. ಒಂದು ಹೆಕ್ಟೇರ್ಗೆ ರೂ.25000 ಕೊಡುಗೆ. ಒಟ್ಟು 11687 ಹೆಕ್ಟೇರ್ ಹೂ ಬೆಳೆ ನಾಶವಾದ ರೈತರಿಗೆ ಹೆಕ್ಟೇರ್ ಗೆ ತಲಾ 25000 ದೊರೆಯಲಿದೆ.
ಸಣ್ಣ ಮಧ್ಯಮ ಉದ್ದಿಮೆಗಳ ಎರಡು ತಿಂಗಳ ಕನಿಷ್ಟ ವಿದ್ಯುತ್ ಬಿಲ್ಲ ಮನ್ನಾ
ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆ. 54,000 ಕೈಮಗ್ಗ ನೇಕಾರರಿಗೆ ತಲಾ 2000 ನೀಡಲಿದೆ ಸರಕಾರ
ಅಬಕಾರಿ ಶುಲ್ಕ 17% ಹೆಚ್ಚಳ. ಮದ್ಯ ದುಬಾರಿ
ಇವೆಲ್ಲಾ 7 ರ ನಂತರ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಯೂರಪ್ಪನರು ಘೋಷಿಸಿದ್ದಾರೆ.