ಸಮುದ್ರ ಮಧ್ಯದಲ್ಲಿದೆ ಮಕ್ಕಳ ಪರೀಕ್ಷೆಯ ದೋಣಿ

ಇತ್ತ ದಡ ಸೇರಲೂ ಆಗದೆ ಅತ್ತ ನೀರಲ್ಲೂ ನಿಲ್ಲಲಾಗದೆ ನೀರಿನ ಮಧ್ಯದಲ್ಲಿ ತೇಲಾಡುತ್ತಿದೆ ದೋಣಿ. ಅಂಬಿಗ ಪಾಪ ಹೇಗಾದರೂ ದೋಣಿಯನ್ನು ದಡ ಸೇರಿಸಬೇಕೆಂಬ ಛಲದಲ್ಲಿದ್ದಾರೆ. ಆದರೆ ದೋಣಿಯಲ್ಲಿ ಕುಳಿತಿರುವ ಮಕ್ಕಳು ಮಾತ್ರ ದೋಣಿ ಯಾವಾಗ ದಡ ಸೇರಲಿದೆಯೋ ಎಂಬ ಯೋಚನೆಯಲ್ಲಿದ್ದಾರೆ. ವರ್ಷ ಪೂರ್ತಿ ಓದಿ ಅಭ್ಯಾಸ ಮಾಡಿ ಪರೀಕ್ಷೆ ಎಂಬ ರಣರಂಗದಲ್ಲಿ ಹೋರಾಡಿ ವಿಜಯಶಾಲಿಯಾಗಬೇಕಿದ್ದ ಮಕ್ಕಳು ಪಾಪ ನಾಲ್ಕು ಗೋಡೆಯ ಮಧ್ಯೆ ಕುಳಿತು ದಿನಾ ಪೂರ್ತಿ ಚಿಂತಿಸುವಂತೆ ಮಾಡಿದೆ.

ಪರೀಕ್ಷೆ ಬರೆದು ರಜಾ ಸಮಾಯದಲ್ಲಿ ಒಂದಷ್ಟು ಖುಷಿಯಾಗಿ ದಿನ ಕಳೆಯಬೇಕಿದ್ದ ಮಕ್ಕಳು ಅತ್ತ ಪರೀಕ್ಷೆ ಬರೆಯದೆ ಇತ್ತ ರಜಾ ಸಮಯವನ್ನು ನೆಮ್ಮದಿಯಾಗಿ ಕಳೆಯಲಾಗದೆ ಕಂಗಲಾಗಿದ್ದಾರೆ ಆದರು ಮನಸಲ್ಲಿ ಒಂದಷ್ಟು ಧೈರ್ಯ ತುಂಬುವಂತ ಕೆಲಸವನ್ನು ಹೆತ್ತವರು, ಮತ್ತು ಗುರು-ಹಿರಿಯರು ಮಾಡುತ್ತಿದ್ದಾರೆ. ಕೊರೋನ ವೈರಸ್ ಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ದೇಶಕ್ಕೆ ದೇಶವೆ ಲಾಕ್ ಡೌನ್ ಹೇರಿಕೊಂಡು ಕುಳಿತಿದೆ, ದಿನಾಂಪ್ರತಿ ಕೂಲಿ ಕೆಲಸ ಮಾಡಿ ಮಕ್ಕಳಿಗೆ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿಸಿ ಅವರಿಗೆ ಉತ್ತಮ ಉದ್ಯೋಗ ಕೊಡಿಸುವ ಕನಸು ಹೊತ್ತು ಕುಳಿತವರಿಗೆಲ್ಲ ಈ ವರ್ಷ ಮಹಾಮಾರಿಯ ಆಗಮನದಿಂದ ಆಕಾಶವೇ ಕಳಚಿ ಮೈಮೇಲೆ ಬಿದ್ದಂತೆ ಆಗಿದೆ‌. ಎಷ್ಟೆಷ್ಟೊ ದೊಡ್ಡ ಪೇಟೆಗಳು ಈಗ ಕೇವಲ ಹಳ್ಳಿಯ ರೂಪಕ್ಕೆ ತಲುಪಿವೆ, ಶಾಲಾ ಕಾಲೇಜುಗಳ ದಾಖಲಾತಿಗಳಿಗಾಗಿ ಅತ್ತ ಇತ್ತ ಓಡಾಡ ಬೇಕಿದ್ದ ಕಾಲುಗಳು ಮನೆಯ ಒಳಗೆನೆ ಸದ್ದು ಮಾಡುತ್ತಿವೆ. ಈ ರಜಾ ಸಮಯವನ್ನು ಎಲ್ಲೇಲ್ಲೋ ಕಳೆಯ ಬೇಕಿದ್ದ ಜೀವಗಳು ಜೈಲಿನಲ್ಲೆ ಕುಳಿತು ದಿನಗಳನ್ನು ಕಳೆಯುವಂತ ವಾತಾವರಣ ನಿರ್ಮಾವಾದಂತಿದೆ.

ನಾಳೆ ಬಿಡುಗಡೆಯಾಗಬಹುದು ನಾಡಿದ್ದು ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಗಳು ಇದೀಗ ಕೇವಲ ನಿರೀಕ್ಷೆಗಳಾಗಿಯೆ ಉಳಿದಿವೆ, ಪ್ರತಿ ಕ್ಷಣವೂ ದೋಣಿಯನ್ನು ಅಂಬಿಗ ಹೇಗಾದರೂ ಮಾಡಿ ದಡ ಸೇರಿಸುವರು ಎಂಬ ವಿಶ್ವಾಸದಲ್ಲಿದ್ದಾರೆ, ಆದರೆ ಇಲ್ಲಿ ಮೂಡುವ ಪ್ರಶ್ನೆಗಳು…ಮಾತ್ರ ಬೇರೆಯೆ. ದೋಣಿ ದಡ ಹೇಗೋ ಸೇರಬಹುದು ಆದರೆ ಯುದ್ಧದ ರಣರಂಗಕ್ಕೆ ಯಾವಾಗ ಪ್ರವೇಶವಾಗುತ್ತೋ?

ಇದಕ್ಕಾಗಿ ಯಾವಾಗ ದಿನಾಂಕ ಪ್ರಕಟವಾಗುತ್ತೊ ಎಂಬುದು ಬಹು ದೊಡ್ಡ ಪ್ರಶ್ನೆ.
ಇಷ್ಟು ವರ್ಷಗಳಲ್ಲಿ ಆಚರಣೆಗೆ ಬಾರದ ಕೆಲವು ಸಂಸ್ಕಾರಗಳು ಈ ವರ್ಷವಾದರೂ ಬಂದಿದೆ ಎಂದು ಕೆಲವರು ಖುಷಿ ಪಡುವವರಿದ್ದಾರೆ. ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ ಎಂಬ ಹಾಡುಗಳು ಕೆಲವರ ಮನದಲ್ಲಿ ಗುಣುಗುಡುತ್ತಿವೆ.

ಕಣ್ಣಿಗೆ ಕಾಣದ ವೈರಸ್ ಇಡೀ ಪ್ರಪಂಚವನ್ನೆ ಬೆಚ್ಚಿಬೀಳಿಸುವಂತೆ ಮಾಡಿದೆ ಭೂಮಿಯನ್ನು ಸ್ಮಶಾನದಂತ ವಾತಾವರಣಕ್ಕೆ ದೂಡಿದೆ, ಮನೆಯಿಂದ ಹೊರಗಡೆ ಬಂದರೆ ಇಹಲೋಕವನ್ನೆ ಮರೆತು ಬಿಡುವಂತ ಗಾಬರಿ ಮೂಡಿಸುತ್ತಿದೆ ಇಂತಹ ದುಃಖಗಳು ಮನಸುಗಳನ್ನು ಕೊರೆಯುತ್ತಿರುವಾಗ ಒಬ್ಬರಿಗೊಬ್ಬರು ತಬ್ಬಿಕೊಂಡು ಸಮಾಧಾನಿಸುವುದಕ್ಕೂ ಅವಕಾಶ ಇಲ್ಲದಂತೆ ಮಾಡಿ ಬಿಟ್ಟಿತು ಕೊರೋನ.

ಸರಕಾರಿ ಶಾಲೆಗಳಲ್ಲಿ ವಿದ್ಯಭ್ಯಾಸ ಮಾಡಿದವರು ಮತ್ತು ಆಂಗ್ಲ ಮಾದ್ಯಮ ಶಾಲೆಗಳಲ್ಲಿ ವಿದ್ಯಭ್ಯಾಸ ಮಾಡಿದವರಿಗೂ ಒಂದೆ ರೀತಿಯ ಕಾನೂನು ತಂದು ಕೊಟ್ಟಂತಿದೆ ಈ ವೈರಸ್, ಓದಿ ಓದಿ ಸುಸ್ತಾಗಿ ಪರೀಕ್ಷೆ ಬರೆದು ಖುಷಿ ಪಡಬೇಕಿದ್ದ ಮನಸುಗಳು ಓದಿಗಿಂತ ದೊಡ್ಡ ತಲೆ ನೋವು ಪರೀಕ್ಷೆ ಯಾವಾಗ ಎಂಬ ಯೋಚನೆಯಲ್ಲಿ ಮುಳುಗಿಸಿಬಿಟ್ಟಿದೆ.

ದೋಣಿ ಹೇಗಾದರೂ ದಡ ಸೇರಬಹುದು, ಪರೀಕ್ಷೆ ಎಂಬ ಯುಧ್ದ ಮುಂದಿನ ದಿನಗಳಲ್ಲಿ ನಡೆದು ಜಯಗಳಿಸಬಹುದು ಆದರೆ ವಿದ್ಯಾಭ್ಯಾಸಕ್ಕೆಂದು ಮೀಸಲಿಡುವ ಇಂತಿಷ್ಟು ದಿನಗಳು ಮುಂದಿನ ವರ್ಷದಲ್ಲಿ ಮಕ್ಕಳಿಗೆ ಸಿಗಲಾರದು. ತರಗತಿಗಳು ಪ್ರಾರಂಭವಾಗಿ ಮಧ್ಯಾವಧಿ ಪರೀಕ್ಷೆಯ ತಯಾರಿಗಳು ನಡೆಯಬೇಕಿದ್ದ ಸಮಯದಲ್ಲಿ ಈ ವರ್ಷ ತರಗತಿಗಳನ್ನು ಪ್ರಾರಂಭಿಸುವ ಅನಿವಾರ್ಯತೆ ಬರಬಹುದೇನೊ ಗೊತ್ತಿಲ್ಲ.

ವಿದ್ಯಾ ಆರ್ಟ್ ಕ್ರಿಯೇಷನ್
ಹರೀಶ್ ಪುತ್ತೂರು
Leave A Reply

Your email address will not be published.