ಉಜಿರೆ | ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಮಗು ಸಾವು

ಉಜಿರೆ: ಮೇ. 5 ರಂದು ರಾತ್ರಿ 11 ಗಂಟೆಗೆ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸಾವನ್ನಪ್ಪಿದ್ದು ಉಳಿದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ.

ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ
ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಪಜ್ಜೆಮಾರು ಕುಟುಂಬದ ಮಗು ಮಾಧವಿ ಎಂಬವರು ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ.
ಉಳಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಕೋ ವಾಹನದಲ್ಲಿ ಸಂಬಂಧಿಕಾರಾದ ಚಾಲಕ ಪ್ರಮೋದ್, ಅವರ ಪತ್ನಿ ಅಶ್ವಿನಿ, ಮಮತ, ಅವರ ಮಗು ಸಾತ್ವಿ ಅವರಿಗೆ ಗಾಯಗಳಾಗಿವೆ.

ಅಪಘಾತದಿಂದ ದೀಕ್ಷಾ ಅವರ ಬಲಕಾಲಿನ ಕೋಲು ಕಾಲಿಗೆ, ಎದೆಗೆ ಗುದ್ದಿದ ಗಾಯ, ಮಮತಾ ಅವರಿಗೆ ಎಡ ಹಣೆಗೆ, ಎಡಕೈ ಮಣಿಗಂಟಿಗೆ, ಕೋಲು ಕೈಗೆ ಗುದ್ದಿದ ಗಾಯ, ಅಶ್ವಿನಿಯವರಿಗೆ ಮುಖಕ್ಕೆ, ಹಣೆಗೆ, ಬಲ ಕಿವಿಗೆ ತೀವ್ರ ರಕ್ತಗಾಯ, ಮಾಧವಿಗೆ ಹಣೆಗೆ ತೀವ್ರ ರಕ್ತಗಾಯ, ಪ್ರಮೋದ್ ಗೆ ಮುಖಕ್ಕೆ, ಕಣ್ಣಿಗೆ, ಕೈಗೆ ತೀವ್ರ ರಕ್ತಗಾಯವಾಗಿತ್ತು.ಗಾಯಾಳುಗಳ ಪೈಕಿ ದೀಕ್ಷಾ, ಮಮತಾ, ಸಾತ್ವಿ ಅವರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಹಾಗೂ ಪ್ರಮೋದ್, ಅಶ್ವಿನಿ, ಮಾಧವಿ ಅವರನ್ನು ತಕ್ಷಣ ಮಂಗಳೂರು ಎಜೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಈ ಪೈಕಿ ಮಗು ಮಾಧವಿ ದಾರಿಮಧ್ಯೆ ಅಸುನೀಗಿದ್ದಾರೆ.ವಾಹನ ಚಾಲಕ ಪ್ರಮೋದ್ ಅವರ ದುಡುಕುತನದ ವಾಹನ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ದಾಖಲಾಗಿದೆ. ಅಪಘಾತದ ಕಾರಣಕ್ಕೆ ಇಕೋ ಕಾರಿನ ಮುಂಭಾಗ ನುಜ್ಜುಗುಜ್ಜಾದರೆ ಟಿಪ್ಪರ್‌ನ ಹಿಂಭಾಗಕ್ಕೆ ಹಾನಿಯಾಗಿದೆ.

ಈ ಬಗ್ಗೆ ಬಂಟ್ವಾಳ ತಾಲೂಕಿನ ಜಗನ್ನಾಥ ಶೆಟ್ಟಿ ಅವರ ಪುತ್ರಿ ದೀಕ್ಷಾ ಅವರು ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.