ಕೇರಳ ಕೊರೋನಾ ವೈರಸ್‌ನ ಅಟ್ಟಹಾಸ ವನ್ನು ಮೆಟ್ಟಿ ನಿಂತದ್ದು ಹೇಗೆ ?

ಮಹಾಮಾರಿ ಕೊರೊನಾ ವೈರಸ್‌ನ ಅಟ್ಟಹಾಸವನ್ನು ಮೆಟ್ಟಿ ನಿಂತ ಕೇರಳ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿ ಎಲ್ಲರನ್ನು ಭಯಬೀತರನ್ನಾಗಿ ಮಾಡಿದ ಕೊರೋನಾ ವೈರಸನ್ನು ಸದೆಬಡಿಯುವಲ್ಲಿ ದೇವರ ನಾಡೇ ಎಂದು
ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಕೇರಳವು ಮುಂದಾಗಿದೆ. ಮೊತ್ತ ಮೊದಲು ಕೊರೊನಾ ವೈರಸ್ ಕಂಡು ಬಂದಿರುವುದು ಕೇರಳ ರಾಜ್ಯದ ಕಾಸರಗೋಡು. ಆದರೆ ಇಂದು ಅದೇ ರಾಜ್ಯವೇ ಮಹಾಮಾರಿ ಕೊರೊನಾವನ್ನು
ಸೋಲಿಸುವುದರಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.

ಭಾರತದ ಎಲ್ಲಾ ರಾಜ್ಯಕ್ಕೆ ಹೋಲಿಕೆ ಮಾಡಿ ನೋಡಿದರೆ ಕೇರಳವು ಹೆಚ್ಚಿನ ಪ್ರಕರಣಗಳನ್ನು ತಪ್ಪಿಸುವಲ್ಲಿ
ಯಶಸ್ಸನ್ನು ಪಡೆದುಕೊಂಡಿದೆ. ಮಹಾಮಾರಿ ಕೊರೋನಾವನ್ನು ಮೆಟ್ಟಿನಿಲ್ಲಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತಿದೆ ಆದಕ್ಕೆ ಕಾರಣ ಓದಿ.

ಲಾಕ್‌ಡೌನ್ ನಿಯಮ ಪಾಲಿಸುವುದು:

ಭಾರತದಲ್ಲಿ ಕೊರೋನಾ ಅಟ್ಟಹಾಸವು ಕೊನೆಗೊಳ್ಳಬೇಕೆಂಬ ಕಾರಣದಿಂದ ಪ್ರಧಾನಿ ಮೋದಿಯವರು ಲಾಕ್‌ಡೌನ್ ನಿಯಮವನ್ನು ಜಾರಿಗೊಳಿಸಿದರು. ಅದರ ಪರಿಣಾಮದಿಂದ ಜನರು ಗುಂಪುಗಾರಿಕೆ ಯಿಂದ ನಿಲ್ಲವುದು, ಅನಾವಶ್ಯಕವಾಗಿ ಮನೆಯಿಂದ ಹೊರಬರುವುದು ನಿಷೇಧಿಸಲಾಯಿತು. ಈ ಸಮಯದಲ್ಲಿ ಕೇರಳದ ಪೊಲೀಸ್ ಬಿಗಿ ಭದ್ರತೆ, ಮತ್ತು ಲಾಕ್‌ಡೌನ್‌ನ ಸಮಯದಲ್ಲಿ ಡ್ರಾನ್‌ ಕ್ಯಾಮರವನ್ನು ಬಳಸುವುದರಿಂದ ಜನರು ಮನೆಯಿಂದ ಹೊರಗೆ ಬರುವುದನ್ನು ತಡೆಗಟ್ಟಿ ಕೊರೋನಾ ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿಡುವಂತೆ ಮಾಡಲಾಗಿದೆ.

ಮೊತ್ತ ಮೊದಲು ಸಂಪರ್ಕವನ್ನು ಪತ್ತೆಹಚ್ಚುವುದು :

ಕೇರಳದ ಆರೋಗ್ಯ ಸಚಿವ ಕೆ ಶೈಲಜಾ ಸೂಚಿಸಿರುವ ಮಾರ್ಗದರ್ಶನದಂತೆ ಕೇರಳದ ಆಸ್ವತ್ರೆಗಳಲ್ಲಿ ಹೆಚ್ಚಿನ ರೀತಿಯ ಪರೀಕ್ಷೆಗಳು ನಡೆಯುತ್ತಿತ್ತು. ಈ ಮೊದಲು ಕಾಸರಗೋಡಿನಲ್ಲಿ ಕೊರೋನಾ ವೈರಸ್
ಕಂಡುಬಂದಾಗ ಕೇರಳ ಮುಂಜಾಗ್ರತೆ ಕ್ರಮವನ್ನು ಮಾಡಿತು. ಸೋಂಕಿತ ವ್ಯಕ್ತಿಯು ಯಾರೊಂದಿಗೆ ಸಂಪರ್ಕವನ್ನು ಹೊಂದಿರುವರು ಹಾಗೂ ಅಂತಹ ಪ್ರದೇಶಗಳಿಂದ ಪತ್ತೆಹಚ್ಚಿ ಸಂಶಯ ಬರುವಂತ ವ್ಯಕ್ತಿಯನ್ನು ಪರೀಕ್ಷಿಸಲಾಯಿತು. ಅದೃಷ್ಟವಶಾತ್ ಕೇರಳ ರಾಜ್ಯದಲ್ಲಿ ಕರ್ತವ್ಯನಿರತ ಅಧಿಕಾರಿಗಳು ಮತ್ತು ತಜ್ಞರ ತಂಡವಿರುವುದರಿಂದ ಅವರು ಪರಿಸ್ಥಿತಿಯನ್ನು ತೀವ್ರವಾಗಿ ಅವಲೋಕಿಸಿ ಸೋಂಕಿತ ವ್ಯಕ್ತಿಯನ್ನು
ಹಾಗೂ ಸಂಪರ್ಕವನ್ನು ಹೊಂದಿದ ವ್ಯಕ್ತಿಯನ್ನು ಅತೀ ವೇಗದಲ್ಲಿ ಪತ್ತೆಹಚ್ಚಲಾಗಿತು.

ಮಾರ್ಗ ನಕ್ಷೆಯನ್ನು ಕಂಡು ಹಿಡಿಯುವುದು:

ಜಿಲ್ಲಾ ಅಧಿಕಾರಿಗಳು ಸೋಂಕಿತ ಜನರ ಮಾರ್ಗ ನಕ್ಷೆಗಳನ್ನು ತಯಾರಿಸಲು ಪ್ರಾರಂಭಿಸಿದರು, ಇದರಲ್ಲಿ ಹೊರದೇಶದಿಂದ ಬಂದ ರೋಗಿಯು ಭಾರತಕ್ಕೆ ಬಂದು ಇಳಿದಾಗ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ಅವರನ್ನು ಅಸ್ವತ್ರೆಗೆ ದಾಖಲಿಸುವವರೆಗೆ ಪ್ರತಿಯೊಂದು ಹಂತವನ್ನು ಪತ್ತೆಹಚ್ಚುವ ಮಾಹಿತಿಯು ಒಳಗೊಂಡಿರುತ್ತದೆ.

ಕ್ವಾಲೆಟೈನ್ ಅವಧಿ :

ಸಂಶಯಾಸ್ಪದ ವ್ಯಕ್ತಿಯು ಹದಿನಾಲ್ಕು ದಿನಗಳವರೆಗೆ ಮನೆಯಿಂದ ಹೊರ ಹೋಗುವಂತಿಲ್ಲ ಹಾಗೂ ಇತರ ವ್ಯಕ್ತಿಯೊಂದಿಗೆ ಸಮೀಪದ ಸಂಪರ್ಕವನ್ನು ಹೊಂದುವಂತಿಲ್ಲ ಎಂಬುದು ಹೇಳಲಾಗಿದೆ. ಆದರೆ ಕೇರಳ ಆರೋಗ್ಯ ಇಲಾಖೆಯು ಕ್ವಾಲೆಟೈನ್ ಅವಧಿಯನ್ನು 21 ದಿನಗಳವರೆಗೆ ಹೆಚ್ಚಿವೆ.

ಮಾನಸಿಕ ಧೈರ್ಯ ತುಂಬುವುದು :

ಸೋಕಿತ ವ್ಯಕ್ತಿಯುಭಯಬೀತರಾಗುವುದು ಮಾತ್ರವಲ್ಲ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಅದುದರಿಂದ ಅವರೊಂದಿಗೆ ಸನಿಹದ ಸಂಪರ್ಕವನ್ನು ಹೊರತುಪಡಿಸಿ, ಲೈವ್ ಕೌನ್ಸೆಲಿಂಗ್ ಹಾಟ್‌ಲೈನ್ ಬಳಸುವುದರಿಂದ ಆರೋಗ್ಯ ವಿಭಾಗವು ರೋಗಿಗಳೊಂದಿಗೆ ಸಂಪರ್ಕವಿರುತ್ತದೆ. ಮತ್ತು ರೋಗಿಗಳಿಗೆ ಉತ್ತಮ ಮಾನಸಿಕ ಬೆಂಬಲವನ್ನು ನೀಡಲು ಸಾಧ್ಯವಾಗುತ್ತದೆ.

ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮ :

ಕೊರೋನಾದ ಕುರಿತು ಇಲ್ಲದ ಸಲ್ಲಾದ ವಿಷಯಗಳನ್ನು ಹರಡಿಸಿ ಜನರನ್ನು ಭಯಪಡಿಸುವವರ ವಿರುದ್ಧ ಕೇರಳ ಸರ್ಕಾರವು ಸರಿಯಾದ ನಿಟ್ಟಿನ ಕ್ರಮವನ್ನು ಜಾರಿಗೊಳಿಸಲು ಪೊಲೀಸರಿಗೆ ನಿರ್ದೇಶಿಸಲಾಯಿತು. ಇದರಿಂದ ಫೋನ್‌ಗಳಲ್ಲಿ ರವಾನೆಯಾಗುತ್ತಿದ್ದ ಸುಳ್ಳು ಸುದ್ದಿಗಳು ನಿಂತುಹೋದವು. ಈ ಕಾರಣಗಳಿಂದ ಕೇರಳ ರಾಜ್ಯವು ಇಂದು ಕೊರೋನಾದ ಅಟ್ಟಹಾಸವನ್ನು ಮೆಟ್ಟಿನಿಂತ ನಾಡು ಎಂದು ಹೆಸರನ್ನು ಪಡೆದುಕೊಂಡಿದೆ.

ಚೈತ್ರ ಲಕ್ಷ್ಮಿ, ಬಾಯಾರು,
ಪ್ರಥಮ ಎಂ.ಸಿ.ಜೆ,
ವಿವೇಕಾನಂದ ಕಾಲೇಜು, ಪುತ್ತೂರು.

Leave A Reply

Your email address will not be published.