ಗೂನಡ್ಕ ಭಾರಿ ಗಾಳಿ-ಮಳೆ ದರಕಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ವರದಿ : ಹಸೈನಾರ್ ಜಯನಗರ


ಮೇ 5ರಂದು ಸಂಜೆ 4ಗಂಟೆಗೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಗೂನಡ್ಕ ದರಕಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ. ಇದರಲ್ಲಿ ಹಲವಾರು ಮನೆಗಳಿಗೆ ಮರದ ಕೊಂಬೆಗಳು ಮುರಿದು ಬಿದ್ದು ಹಾನಿಗೊಂಡಿದೆ. ಕೆಲವು ಮನೆಗಳ ಮೇಲ್ಛಾವಣಿ ಬೀಸಿದ ಭಾರಿ ಗಾಳಿಯಿಂದ ಸಂಪೂರ್ಣವಾಗಿ ಹಾರಿಹೋಗಿರುತ್ತದೆ. ಈ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ಜನರು ಇದ್ದರೂ ಯಾವುದೇ ಪ್ರಾಣಾಪಾಯ ಗಳಿಲ್ಲದೆ ಪಾರಾಗಿದ್ದಾರೆ.


ದರಕಾಸ್ತು ನಿವಾಸಿ ಮಹಮ್ಮದ್ ರವರ ಮನೆಯ ಸುಮಾರು ಹತ್ತಕ್ಕೂ ಹೆಚ್ಚು ಸೀಟುಗಳು ಗಾಳಿಯಿಂದ ಹಾರಿ ಹೋಗಿದ್ದು, ಬಶೀರ್ ಎಂಬವರ ಮನೆಯ ಸುಮಾರು ಅರ್ಧದಷ್ಟು ಭಾಗದ ಮೇಲ್ಛಾವಣಿಯ ಸೀಟುಗಳು ಗಾಳಿಯಿಂದ ಹಾರಿಹೋಗಿರುತ್ತದೆ.
ವಾಹಿದ್ ಎಂಬವರ ಮನೆಯ ಹಿಂಭಾಗಕ್ಕೆ ಮರದ ಗೊಂಬೆಯೊಂದು ಮುರಿದು ಬಿದ್ದು ಹಾನಿಗೊಂಡಿದೆ. ಅದೇ ರೀತಿ ಲತೀಫ್ ಸಖಾಫಿ ಗೂನಡ್ಕ ಇವರ ಮನೆಯ ಬದಿಯಲ್ಲಿದ್ದ ಮಾವಿನ ಮರದ ಬೃಹತ್ ಕೊಂಬೆ ಗಾಳಿಗೆ ಮುರಿದು ಮನೆಯ ತಾರಸಿ ಮೇಲೆ ಬಂದು ಬಿದ್ದಿರುವ ಕಾರಣ ಶೌಚಾಲಯ ಹಾನಿಗೊಂಡಿದೆ. ಅದೇರೀತಿ ಪರಿಸರದಲ್ಲಿ ಅಬೂಬಕ್ಕರ್ ಮುಸ್ಲಿಯಾರ್, ವಾಸು ಬೆಳ್ಚಪ್ಪಾಡ, ಮಧುಸೂದನ್, ಗೋಪಾಲ ಗೂನಡ್ಕ, ನವೀನ್ ಜಿ ಜಿ, ರಫೀಕ್ ದರ್ಖಾಸ್ತು, ಅಬ್ದುಲ್ಲಾ ದರ್ಖಾಸ್ತು, ಅಬ್ದುಲ್ಲಾ ಸಿಎಂ, ಮಹಮ್ಮದ ಪಾಂಡಿ, ಅದೇರೀತಿ ಮಹಮ್ಮದ್ ಕುಂಞಿ ಗೂನಡ್ಕ ರವರ ನ್ಯಾಯಬೆಲೆ ಅಂಗಡಿ ಇರುವ ಕಟ್ಟಡದ ಮೇಲ್ಭಾಗದ ಸೀಟುಗಳು ಗಾಳಿಯ ರಭಸಕ್ಕೆ ಹಾನಿಗೊಂಡಿದೆ.
ಮುಖ್ಯರಸ್ತೆಯಲ್ಲಿರುವ ಗೂನಡ್ಕ ಅಂಚೆಕಚೇರಿಯ ಮೇಲ್ಚಾವಣಿಯ ಸೀಟುಗಳು ಗಾಳಿಗೆ ಹಾರಿ ಗೋಡೆಗಳು ಬಿರುಕು ಬಿಟ್ಟಿರುತ್ತದೆ.


ವಿಷಯ ತಿಳಿದ ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ತಹಸೀಲ್ದಾರರಿಗೆ ದೂರವಾಣಿಯ ಮೂಲಕ ಮಾಹಿತಿಯನ್ನು ತಿಳಿಸಿರುತ್ತಾರೆ. ಸ್ಥಳಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಸಂಪಾಜೆ ಗ್ರಾಮ ಲೆಕ್ಕಾಧಿಕಾರಿ ಪರಿಶೀಲನೆ ನಡೆಸಿರುತ್ತಾರೆ.
ಘಟನೆಗೆ ಸಂಬಂಧಿಸಿದಂತೆ ಗೋನಾಡ್ಕ ಪರಿಸರದ ಯುವಕರ ತಂಡವು ಮತ್ತು ಎಸ್ ವೈ ಎಸ್ ಎಸ್ಎಸ್ಎಫ್ ಇದರ ತುರ್ತು ಘಟಕ ಸಮಿತಿ ವತಿಯಿಂದ al-ameen ಚಾರಿಟೇಬಲ್ ಟ್ರಸ್ಟ್ ಗೂನಡ್ಕ ಇದರ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ರವರ ನಿರ್ದೇಶನದ ಮೇರೆಗೆ ದಾನಿಗಳ ಸಹಕಾರದಿಂದ ಹಾನಿಗೊಂಡ ಮನೆಗಳಿಗೆ ತಾತ್ಕಾಲಿಕ ಶೀಟ್ ಗಳನ್ನು ಹಾಕಿ ಸಹಕರಿಸಿದ್ದಾರೆ. ಈ ಘಟನೆಯಿಂದ ಪರಿಸರದಲ್ಲಿ ಸುಮಾರು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದು ಊರಿನವರ ಮತ್ತು ಸಂಘಟನೆಯ ಯುವಕರ ಸಹಕಾರದಿಂದ ವಿದ್ಯುತ್ ಕಂಬದ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಅಬುಸಾಲಿ, ಗೂನಡ್ಕ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಉಮ್ಮರ್
ಭೇಟಿ ನೀಡಿದರು ಎಂದು ತಿಳಿದುಬಂದಿದೆ.

Leave A Reply

Your email address will not be published.