ಮಂಗಳೂರು ಸೆಂಟ್ರಲ್ ಮಾರ್ಕೆಟ್ ಅನ್ನು ಕೆಡಹುವ ಕಾರ್ಯಕ್ಕೆ ಹೈಕೋರ್ಟ್ ತಡೆಯಾಜ್ಞೆ

ಈ ಹಿಂದೆ ಕೇಂದ್ರ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸುವುದಾಗಿ ಮಂಗಳೂರು ನಗರ ನಿಗಮ ನಿರ್ಧಾರವನ್ನು ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿತ್ತು. ಈ ಕಟ್ಟಡವನ್ನು ನೆಲ ಸಮಗೊಳಿಸುವ ವಿರುದ್ಧ ಇದೀಗ ಹೈಕೋರ್ಟ್
ತಡೆಯಾಜ್ಞೆ ನೀಡಿದೆ.

ನಗರ ನಿಗಮ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಕೇಂದ್ರ ಮಾರುಕಟ್ಟೆ ಕಟ್ಟಡವನ್ನು ತೆಗೆದು ಅದನ್ನು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಕಟ್ಟಡವಾಗಿ ಮಾರ್ಪಡಿಸಲು ಅವು ನಿರ್ಧರಿಸಿದ್ದವು. ಕೊರೋ ನಾ ವೈರಸ್ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಾದ ಸಾಮಾಜಿಕ ಅಂತರದ ಪರಿಕಲ್ಪನೆಯನ್ನು ಹಳೆಯ ಕಟ್ಟಡವು ಬೆಂಬಲಿಸುವುದಿಲ್ಲ ಎಂದು ನಗರಪಾಲಿಕೆ ಮತ್ತು ಜಿಲ್ಲಾಡಳಿತದ ನಿಲುವಾಗಿತ್ತು.

ಹೀಗಾಗಿ, ಕೇಂದ್ರ ಮಾರುಕಟ್ಟೆಯಲ್ಲಿನ ಸಗಟು ವ್ಯಾಪಾರಿಗಳನ್ನು ಬೈಕಂಪಾಡಿಯಲ್ಲಿನ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಹೈಕೋರ್ಟ್ ತಕ್ಷಣಕ್ಕೆ ಮಾರ್ಕೆಟ್ ಅನ್ನು ಕೆಡವದಂತೆ ತಡೆಯಾಜ್ಞೆ ನೀಡಿದೆ.

Leave A Reply

Your email address will not be published.