ಕೊಡಗು ಗಡಿ ಪ್ರದೇಶಗಳಲ್ಲಿ ಬಿಗು ಗೊಂಡ ತಪಾಸಣೆ

ವರದಿ : ಹಸೈನಾರ್ ಜಯನಗರ

ಲಾಕ್ ಡೌನ್ ಮೂರನೆಯ ಹಂತದ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲೆಯ ಗಡಿ ಭಾಗಗಳ ಚೆಕ್ ಪೋಸ್ಟ್ ಗಳಲ್ಲಿ ಭಾರಿ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಸರ್ಕಾರದ ಆದೇಶದ ಮೇರೆಗೆ ಯಾತ್ರಿಕರ ಸಂಖ್ಯೆಯು ಹೆಚ್ಚಿರುವ ಹಿನ್ನಲೆಯಲ್ಲಿ ಸೂಕ್ತ ದಾಖಲೆಗಳ ತಪಾಸಣೆ ಮತ್ತು ಮುಂಜಾಗೃತ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗಿದೆ.
ಇದರ ಅಂಗವಾಗಿ ಕಲ್ಲುಗುಂಡಿ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆ ಯರಿಂದ ಪರಿಶೀಲನಾ ಕಾರ್ಯ ನಡೆಯುತ್ತಿದೆ.


ಹೊರ ಜಿಲ್ಲೆಗಳಿಂದ ಬರುತ್ತಿರುವ ಪ್ರಯಾಣಿಕರ ಸಂಪೂರ್ಣ ಮಾಹಿತಿ ಮತ್ತು ಅವರಲ್ಲಿರುವ ಅನುಮತಿ ಪತ್ರದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ .ಆಯಾ ಜಿಲ್ಲಾಡಳಿತ ನೀಡಿದ ಪಾಸುಗಳ ಅನ್ವಯ ಹೊರ ಜಿಲ್ಲೆಯಿಂದ
ನಮ್ಮ ಜಿಲ್ಲೆಗೆ ಬಂದವರನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಕೈಗಳಿಗೆ ಸೀಲುಗಳನ್ನು ಹಾಕಿ ಅವರನ್ನು ಕೋರಂಟೇಂನ್ ನಿಗೆ ಒಳಪಡುವಂತೆ ಸೂಚಿಸಲಾಗುತ್ತಿದೆ. ಸ್ಥಳದಲ್ಲಿ ಮಾಪನದಿಂದ ಯಾತ್ರಿಕರ ತಪಾಸಣೆ ಒಳಪಡಿಸಲಾಗುತ್ತಿದೆ.

Leave A Reply

Your email address will not be published.