ಕಾರ್ಮಿಕರ ಉಚಿತ ಬಸ್ ಪ್ರಯಾಣವನ್ನು ಮತ್ತೆ 2 ದಿನ ಮುಂದೂಡಿದ ಸಿಎಂ ಯಡಿಯೂರಪ್ಪ
ಸರಕಾರ ಇದೀಗ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಂದ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಲು ಅವಕಾಶ ನೀಡಿದ್ದು ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಇನ್ನು ಎರಡು ದಿನಗಳ ವರೆಗೆ ಮುಂದುವರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುಧ್ಧಿಗೋಷ್ಠಿಯಲ್ಲಿ ತಿಳಿಸಿದರು.
ಈ ಮೊದಲು ತಿಳಿಸಿದಂತೆ ಮೇ 5 ರವರೆಗೆ ಮಾತ್ರ ಇದರ ಸೌಲಭ್ಯ ನೀಡಲಾಗಿತ್ತು. ಆದರೆ ಕಾರ್ಮಿಕರ ಮತ್ತು ಜನರ ಹಿತದೃಷ್ಟಿಯಿಂದ ಉಚಿತ ಪ್ರಯಾಣವನ್ನು ಮೇ 7ರವರೆಗೆ ನೀಡಲಾಗಿದೆ. ಕಾರ್ಮಿಕರು ಮತ್ತು ಇತರೆ ಜನರು ಬಸ್ ನಿಲ್ದಾಣಗಳಲ್ಲಿ ಗುಂಪು ಸೇರದೆ ನೆಮ್ಮದಿಯಿಂದ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.
951 ಕೆ.ಎಸ್.ಆರ್.ಟಿ.ಸಿ. ಬಸ್ ಗಳನ್ನು ಒದಗಿಸಲಾಗಿದ್ದು ,ಮೇ 3ರಂದು ಅಂದಾಜು 30 ಸಾವಿರ ಜನರು ತಮ್ಮ ಊರುಗಳಿಗೆ ತೆರಳಿರುತ್ತಾರೆ. ಇಂದು 50 ಬಸ್ ಗಳಲ್ಲಿ ಸುಮಾರು 1,500 ಜನ ತಮ್ಮ ಊರಿಗೆ ತಲುಪಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ ಗಳು ಮತ್ತು ರಾಜ್ಯದ ವಿವಿಧೆಡೆ 400 ಬಸ್ ಗಳನ್ನು ಈ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ.ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.