ಶ್ರೀ ರತ್ನ ಪ್ರತಿಷ್ಠಾನ ದಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ

ಮಂಗಳೂರು : ಮಂಗಳೂರು ನಲ್ಲಿ ಕಾರ್ಯ ನಿರ್ವಹಿಸುತ್ತಿರವ ಶ್ರೀ ರತ್ನ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಸುಮಾರು 50 ಕ್ಕಿಂತ ಹೆಚ್ಚಿನ ಮನೆಗಳಿಗೆ ಅಕ್ಕಿ, ಗೋಧಿ ಹಿಟ್ಟು, ಬೇಳೆ ಮುಂತಾದ ದಿನಸಿ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಗಿದೆ.

ಶ್ರೀ ರತ್ನ ಪ್ರತಿಷ್ಠಾನ ಶಿವಮೊಗ್ಗದ ಸ್ಥಾಪಕರಾಗಿರುವ ಮಾಧವ ಎಂ. ಎಸ್, ಪ್ರೀತಾ ಮಾಧವ, ಧಾತ್ರಿ ಮಂಗಳೂರು, ಧನ್ವಿತ್ , ಹಾಗೂ ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ, ವೃಂದಾ ಕೊನ್ನಾರ್ ಮೊದಲಾದವರು ದಿನಸಿ ಸಾಮಗ್ರಿ ಗಳ ಕಿಟ್ ವಿತರಿಸುವಲ್ಲಿ ನೆರವಾದರು.

Leave A Reply

Your email address will not be published.