ಅಂಡರ್ವರ್ಲ್ಡ್ ನಲ್ಲಿ ಲಾಕ್ಡೌನ್ ಇಲ್ಲ | ಹಳೆಯ ದ್ವೇಷಕ್ಕೆ ಹೊಸ ಜೀವ ಬಲಿ !

ಬೆಂಗಳೂರು : ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಆದರೆ ಈ ಮನುಷ್ಯನ ದ್ವೇಷ ಎಷ್ಟು ಸಮಯವೆಂದು ಯಾರಿಗೂ ತಿಳಿಯದು. ಆದರೆ ಹಗೆಯನ್ನೆ ಸಾಧಿಸುವ ಅಂಡರ್ ವರ್ಲ್ಡ್ ನಲ್ಲಿ ಸಮಯಕ್ಕೆ ಬೆಲೆಯಿಲ್ಲ. ಅಲ್ಲಿ ಎದುರಿನ ವ್ಯಕ್ತಿಯ ಹೊಗೆ ಏಳುವವರೆಗೆ ಹಗೆ !!

ಇದಕ್ಕೆ ಉದಾಹರಣೆ ಎಂಬಂತೆ ಕೆ.ಜಿ.ಹಳ್ಳಿಯಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ ಹಳೇ ದ್ವೇಷದ ನೆಪದಲ್ಲಿ ಮಚ್ಚು ಝಳಪಿಸಲಾಗಿದೆ.

ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯಾರು ಬೀಸಿ ಹತ್ಯೆಗೈದಿರುವ ದುರ್ಘಟನೆ ಶನಿವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯು ಕೂಡ ರೌಡಿಶೀಟರ್ ಆಗಿದಬುಜ್ಜು (30) ಎಂದು ಗುರುತಿಸಲಾಗಿದೆ. ಕೆ.ಜಿ.ಹಳ್ಳಿಯ ನ್ಯೂ ಬಾಗಲೂರು ಲೇಔಟ್ ನ ಬುಜ್ಜು ಮನೆ ಸಮೀಪವೇ ತಲವಾರುಗಳಿಂದ ಬಲವಾಗಿ ಹೊಡೆದು ಹತ್ಯೆಗೈದು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಹತ್ಯೆಯಾದ ರೌಡಿ ತಕ್ಷಣ ಕ್ಕೊಂದು ಬುಜ್ಜು ಈ ಹಿಂದೆ ಸ್ಟಾಲಿನ್ ಎಂಬಾತನ ಕೊಲೆಯಲ್ಲಿ ಭಾಗಿಯಾಗಿದ್ದ. ಇದಕ್ಕೆ ಪ್ರತಿಕಾರವಾಗಿ ಸ್ಟಾಲಿನ್ ಬೆಂಬಲಿಗರು ಬುಜ್ಜು ಸಹೋದರ ವಿನೋದ್ ನನ್ನು ಕೊಲೆ ಮಾಡಿ ತಕ್ಷಣ ಕ್ಕೊಂದು ರಿವೇಂಜ್ ತಗೊಂಡಿದ್ದರು. ಆದರೂ ಅವರಿಗೆ ಸಮಾಧಾನ ಆಗಿರಲಿಲ್ಲ. ಅನಂತರ ಇಬ್ಬರ ನಡುವೆ ಸಂಧಾನ ನಡೆದಿತ್ತಾದರೂ ಮುಚ್ಚಿದ ಬೂದಿಯ ಒಳಗೆ ಹಗೆ ಜೀವಂತವಾಗಿತ್ತು. ಈಗ ಬುಜ್ಜು ಕೊಲೆಯಾಗಿದೆ. ಹಳೆಯ ಅಕೌಂಟ್ ಕ್ಲೋಸ್ ಆಗಿದೆ.

ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲಿಸಿಕೊಂಡಿದ್ದಾರೆ.

ವರದಿ : ರಾಜೇಶ್ ಕೆ. ಶೇಣಿ

Leave A Reply

Your email address will not be published.