ಕೋರೋನಾ ಕಾಲದಲ್ಲಿ ಮದುವೆಗೆ ಇನ್ನು ಗರಿಷ್ಟ 50 ಜನ ಭಾಗವಹಿಸಬಹುದು
ನವದೆಹಲಿ : ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಪ್ರಸ್ತುತ ಸಮಯಕ್ಕೆ ಅನ್ವಯವಾಗುವಂತೆ ಮದುವೆ ಸಮಾರಂಭಗಳನ್ನು ನಡೆಸಲು ಕೇಂದ್ರ ಸರ್ಕಾರ ಇದೀಗ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮದುವೆಯ ಸೀಸನ್ ನಲ್ಲಿ ಕಂಗೆಟ್ಟಿದ್ದ ಜನರಲ್ಲಿ ಸ್ವಲ್ಪ ಮಟ್ಟಿನ ಮಂದಹಾಸ ಮೂಡುವಂತಾಗಿದೆ.
ಈಗ ಅಸ್ತಿತ್ವದಲ್ಲಿರುವ ಮಾರ್ಗಸೂಚಿಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿರುವ ಕೇಂದ್ರ ಸರಕಾರ,ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಮದುವೆ ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ.
ಆದರೆ ನಿಯಮಾನುಸಾರ ಈ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದನ್ನು ಖಡ್ಡಾಯ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರಕಾರ, ಐವತ್ತು ಜನರಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಈಗಲೂ ಸಹ ಜಿಲ್ಲಾಡಳಿತ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ, ಮುಂಚಿತವಾಗಿ ಮಾಹಿತಿ ನೀಡಿ ಅನುಮತಿ ಪಡೆಯಬೇಕಾಗಿರುವುದು ಅವಶ್ಯಕ.
ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವವರ ಸಂಖ್ಯೆ ಯಲ್ಲಿ ಯಾವುದೇ ವ್ಯತ್ಯಾಸ ಮಾಡದ ಕೇಂದ್ರ ಸರ್ಕಾರ ಹಿಂದಿನ ನಿಯಮದಂತೆ ಇಪ್ಪತ್ತು ಜನರಿಗಷ್ಟೇ ಅವಕಾಶವಿದೆ.