ಉತ್ತರ ಕೊರಿಯಾ ನಾಯಕ ಕಿಮ್ ಸಾರ್ವಜನಿಕವಾಗಿ ಕಮ್ ಬ್ಯಾಕ್ | ಊಹಾಪೋಹಕ್ಕೆ ಬಿದ್ದ ತೆರೆ
ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತೀರಿಕೊಂಡಿದ್ದಾರೆ ಎಂಬ ಊಹಾಪೋಹಕ್ಕೆ ಈಗ ತೆರೆ ಬಿದ್ದಿದ್ದು ಕಿಮ್ ಸಾರ್ವಜನಿಕವಾಗಿ ಕಮ್ ಬ್ಯಾಕ್ ಆಗಿದ್ದಾರೆ.
ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ತಮ್ಮ ಸರ್ವೋಚ್ಚ ನಾಯಕನನ್ನು ನೋಡಿ ಅಲ್ಲಿ ಭಾಗವಹಿಸಿದವರೆಲ್ಲಾ ಹುಚ್ಚೆದ್ದು ಕುಣಿದು ಕೂಗು ಹಾಕಿದರು ಎಂದು ಕೆಸಿಎನ್ ಎ ತಿಳಿಸಿದೆ.
ಶುಕ್ರವಾರ ನಡೆದ ಕಾರ್ಖಾನೆಯೊಂದರ ಉದ್ಘಾಟನೆಯಲ್ಲಿ ಕಿಮ್ ಜಾಂಗ್ ಅವರ ಸೋದರಿಯೊಂದಿಗೆ ಸೇರಿ ಭಾಗವಹಿಸಿದ್ದರು. ತಮ್ಮ ಸಹೋದರಿ ಕಿಮ್ ಯೋ ಜಾಂಗ್ ಜೊತೆ ಸುಂಜಾನ್ ಫೋಸ್ಪೇಟಿಕ್ ಫರ್ಟಿಲೈಸರ್ ಎಂಬ ಕಾರ್ಖಾನೆಯ ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮದಲ್ಲಿ ಕಿಮ್ ಪಾಲ್ಗೋಂಡಿದ್ದರು ಎಂದು ತಿಳಿದು ಬಂದಿದೆ.